ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಿರುಪತಿ ತಿಮ್ಮಪ್ಪನ ದೇವಾಲಯದ ಒಡೆತನದಲ್ಲಿ 85,705 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಇದೆ.
ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್(ಟಿಟಿಡಿ) ದೇಶದಾದ್ಯಂತ 960 ಸ್ವತ್ತುಗಳ ಮಾರುಕಟ್ಟೆ ಮೌಲ್ಯ ಸರ್ಕಾರದ ಮಾರ್ಗಸೂಚಿ ದರದ ಪ್ರಕಾರ 85,705 ಕೋಟಿ ರೂಪಾಯಿ. ಆದರೆ ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು ಒಂದುವರೆ ಪಟ್ಟು ಹೆಚ್ಚಾಗಿದ್ದು, 2 ಲಕ್ಷ ಕೋಟಿಯಷ್ಟು ಸಂಪತ್ತು ಹೊಂದಿದ ದೇವಾಲಯ ಇದಾಗಿದೆ ಎಂದು ಹೇಳಲಾಗಿದೆ.
ಇದಲ್ಲದೇ, ತಿರುಪತಿ ತಿಮ್ಮಪ್ಪನ ಬಳಿ 14,000 ಕೆಜಿ ಚಿನ್ನ, 14,000 ಕೋಟಿ ರೂಪಾಯಿ ನಗದು ಕೂಡ ಇದೆ. ಒಂದು ವರ್ಷದ ಹಿಂದೆ ಟಿಟಿಡಿ 9 ಸಾವಿರ ಕೆಜಿ ಚಿನ್ನ, 12,000 ಕೋಟಿ ಠೇವಣಿ ಹೊಂದಿತ್ತು. ಕಾಣಿಕೆ ರೂಪದಲ್ಲಿ ತಿರುಪತಿ ತಿಮ್ಮಪ್ಪನಿಗೆ ವಾರ್ಷಿಕ 700 ಕೋಟಿ ರೂಪಾಯಿ ಆದಾಯ ಬರುತ್ತದೆ. ನವಿ ಮುಂಬೈನಲ್ಲಿ 500 ಕೋಟಿ ರೂಪಾಯಿ ಮೌಲ್ಯದ ದೇವಾಲಯ ನಿರ್ಮಿಸಲಾಗುತ್ತಿದೆ. ಸರ್ಕಾರದ ಸೂಚನೆಯಂತೆ ಟಿಟಿಡಿ ಆಸ್ತಿ ಬಗ್ಗೆ ಶ್ವೇತಪತ್ರ ಪ್ರಕಟಿಸುತ್ತಿದ್ದು, ಈ ವರ್ಷದ ಆಸ್ತಿಯ ಮೌಲ್ಯವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಹೇಳಿದ್ದಾರೆ.