alex Certify ನವರಾತ್ರಿಯ ಒಂಭತ್ತು ದಿನ ಒಂಭತ್ತು ಪ್ರಸಾದ: ಈಡೇರುತ್ತೆ ಭಕ್ತರ ಬಯಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯ ಒಂಭತ್ತು ದಿನ ಒಂಭತ್ತು ಪ್ರಸಾದ: ಈಡೇರುತ್ತೆ ಭಕ್ತರ ಬಯಕೆ

ದೇವಿಯ ರೂಪ ಬೇರೆ ಬೇರೆ. ಆಕೆಯ ಮಹಿಮೆ ಕೂಡ ಭಿನ್ನ. ಹಾಗೆ ಆಕೆಯ ಇಷ್ಟಗಳು ಕೂಡ ಬೇರೆಯಾಗಿವೆ. ಹಾಗಾಗಿ ಎಲ್ಲ ದೇವಿಗೂ ಒಂದೇ ಪ್ರಸಾದ ಅರ್ಪಿಸುವುದು ಒಳ್ಳೆಯದಲ್ಲ. ಶಾಸ್ತ್ರದಲ್ಲಿ ಹೇಳಿದಂತೆ ಯಾವ ದೇವಿಗೆ ಯಾವ ಪ್ರಸಾದ ಸೂಕ್ತ ಎಂಬುದನ್ನು ತಿಳಿದುಕೊಂಡು ಅರ್ಪಣೆ ಮಾಡಿದ್ರೆ ದೇವಿ ಪ್ರಸನ್ನಳಾಗ್ತಾಳೆ.

ನವರಾತ್ರಿಯ ಮೊದಲ ದಿನ ಶೈಲಪುತ್ರಿ ರೂಪದಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಪರ್ವತ ರಾಜ ಹಿಮವಂತನ ಪುತ್ರಿಯಾಗಿ ಜನಿಸಿದ ಕಾರಣ ಈಕೆಗೆ ಶೈಲಪುತ್ರಿ ಎಂದು ಕರೆಯಲಾಗುತ್ತದೆ. ನವರಾತ್ರಿಯ ಮೊದಲ ದಿನ ತುಪ್ಪದಿಂದ ಮಾಡಿದ ಪದಾರ್ಥವನ್ನು ದೇವಿಗೆ ಅರ್ಪಿಸಬೇಕು.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪ್ರಭಾವ ಅಧಿಕ. ಸಕ್ಕರೆಯಿಂದ ಮಾಡಿದ ಪದಾರ್ಥ ಮಾಡಿ ನೈವೇದ್ಯ ಮಾಡಿ.

ದೇವಿಯ ಕಿರೀಟದ ಮೇಲೆ ಚಂದ್ರ ಹಾಗೂ ಗಂಟೆಯಿದೆ. ಹಾಗಾಗಿ ಆಕೆಯನ್ನು ಚಂದ್ರಗಂಟಾ ಎಂದೂ ಕರೆಯುತ್ತಾರೆ. ನವರಾತ್ರಿಯ ತೃತೀಯ ದಿನ ಅದನ್ನು ಪೂಜಿಸ್ತಾರೆ. ದೇವಿ ಪ್ರಸನ್ನಳಾಗಲು ಹಾಲನ್ನು ಅರ್ಪಿಸಬೇಕು.

ನವರಾತ್ರಿಯ ನಾಲ್ಕನೇ ದಿನ ದೇವಿ ಕುಶ್ಮಂದಾ ಆರಾಧನೆ ನಡೆಯಲಿದೆ. ಸೂರ್ಯ ಮಂಡಲದ ಮಧ್ಯದಲ್ಲಿ ಈಕೆ ನೆಲೆಸಿದ್ದಾಳೆ. ಆದಿಶಕ್ತಿಯ ಪೂರ್ಣ ಸ್ವರೂಪವಿದು. ಸೃಷ್ಟಿ ಹಾಗೂ ವಿನಾಶ ಎರಡನ್ನೂ ಈಕೆಯೇ ಮಾಡ್ತಾಳೆ. ಈಕೆಯನ್ನು ಪ್ರಸನ್ನಗೊಳಿಸಲು ಮಿಠಾಯಿ ನೈವೇದ್ಯ ಮಾಡಬೇಕು.

ಸ್ಕಂದಮಾತಾ ದೇವಿಯ ಐದನೇ ಸ್ವರೂಪ. ಆಕೆ ಕುಮಾರ ಕಾರ್ತಿಕೇಯನ ತಾಯಿ ಪಾರ್ವತಿ. ಈಕೆಯನ್ನು ಪ್ರಸನ್ನಗೊಳಿಸಲು ಬಾಳೆಹಣ್ಣನ್ನು ಅರ್ಪಿಸಿ. ಬಾಳೆಹಣ್ಣನ್ನು ದಾನ ಮಾಡಿ.

ನವರಾತ್ರಿಯ ಆರನೇ ದಿನ ಕಾತ್ಯಾಯನಿಯ ಆರಾಧನೆ ಮಾಡಲಾಗುತ್ತದೆ. ಅಂದು ಜೇನು ತುಪ್ಪವನ್ನು ತಾಯಿಗೆ ಅರ್ಪಣೆ ಮಾಡಬೇಕು.

ದೇವಿಯ ಏಳನೇಯ ಅವತಾರ ಕಾಳರಾತ್ರಿ. ಅಂದು ಬೆಲ್ಲದುಂಡೆಯನ್ನು ಮಾಡಿ ಅರ್ಪಣೆ ಮಾಡಿ.

ಜಗದಂಬೆಯ ಎಂಟನೇ ಶಕ್ತಿ ಮಹಾಗೌರಿ. ಶಿವಪ್ರಿಯ ಮಹಾಗೌರಿಯನ್ನು ಪ್ರಸನ್ನಗೊಳಿಸಲು ತೆಂಗಿನಕಾಯಿ ಹಾಗೂ ಒಣ ಶುಂಠಿಯನ್ನು ನೈವೇದ್ಯ ಮಾಡಿ.

ದೇವಿಯ ಒಂಭತ್ತನೇ ಅವತಾರ ಸಿದ್ಧಿದಾತ್ರಿ. ಸಿದ್ಧಿದಾತ್ರಿ ಕೃಪೆಗೆ ಭಕ್ತರು ಮೊಸರು, ಮಿಠಾಯಿಯನ್ನು ಸಮರ್ಪಣೆ ಮಾಡಬೇಕು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...