ಒಂದು ಕಡೆ ತುಂತುರು ಮಳೆ….. ಇನ್ನೊಂದು ಕಡೆ, ಎಳೆ ಬಿಸಿಲು ಬೀಳ್ತಾ ಇದ್ದರೆ ಆ ಮನಮೋಹಕ ದೃಶ್ಯ ನೋಡೋದೇನೇ ಒಂದು ಖುಷಿ. ಇದರ ನಡುವೆಯೇ ಕಾಮನ ಬಿಲ್ಲು ಕಾಣಿಸಿಬಿಟ್ಟರೆ. ದೃಶ್ಯ ಕಾವ್ಯವೇ ಕಣ್ಮುಂದೆ ಬಂದ ಹಾಗಿರುತ್ತೆ.
ಮಳೆಬಿಲ್ಲು, ಕಾಮನಬಿಲ್ಲು ಇವು ಪ್ರಕೃತಿಯ ಅದ್ಭುತ ರೂಪಗಳಲ್ಲಿ ಇದು ಒಂದು. ನೀವು ಗಮನಿಸಿದ್ದಿರಾ. ಕಾಮನ ಬಿಲ್ಲು ನಾವೆಲ್ಲ ನೋಡಿದ್ದೇ ಅರ್ಧ.
ವೃತ್ತಾಕಾರದ ಕಾಮನಬಿಲ್ಲು ನಾವೆಂದೂ ನೋಡೇ ಇಲ್ಲ. ನೋಡೋದಕ್ಕೂ ಸಾಧ್ಯವಿಲ್ಲ. ಭೂಮಿಯ ಮೇಲೆ ನಿಂತು ನೋಡೋದಕ್ಕೂ ಸಾಧ್ಯವಿಲ್ಲ ಬಿಡಿ. ಈಗ ಇದೇ ಪೂರ್ಣಾಕಾರದ ಕಾಮನಬಿಲ್ಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೆಡ್ಡಿಟ್ ಅನ್ನೊ ವೆಬ್ಸೈಟ್ನಲ್ಲಿ ಈ ವೀಡಿಯೋವನ್ನ ಶೇರ್ ಮಾಡಲಾಗಿದ್ದು, ಈ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ಯಾರಾಗ್ಲೈಡಿಂಗ್ ಮಾಡೋ ದೃಶ್ಯವನ್ನ ನೋಡ್ಬಹುದು. ಪ್ಯಾರಾಗ್ಲೈಡಿಂಗ್ ಮಾಡುವ ಸಮಯದಲ್ಲಿ ಈ ರೀತಿಯ ವೃತ್ತಾಕಾರದ ಕಾಮನಬಿಲ್ಲು ಕಾಣಿಸಿಕೊಂಡಾಗ ಪ್ಯಾರಾಗ್ಲೈಡಿಂಗ್ ಮಾಡುವವರು ಕೂಡ ಕೆಲ ನಿಮಿಷ ಮೂಕವಿಸ್ಮಿತರಾಗಿದ್ದರು. ಈ ದೃಶ್ಯ ನೋಡಿದಾಕ್ಷಣ ಇದನ್ನ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಅಸಲಿಗೆ ಕಾಮನಬಿಲ್ಲು ಆಪ್ಟಿಕಲ್ ವಿಜ್ಞಾನವಾಗಿದ್ದು, ಇದು ಕಣ್ಣೀಗೆ ಭ್ರಮೆ ಹುಟ್ಟುಹಾಕುವಂತ ದೃಶ್ಯವಾಗಿದೆ. ಸಾಮಾನ್ಯವಾಗಿ ಬಿಸಿಲು ಮತ್ತು ಮಳೆ ಇವೆರಡು ಒಟ್ಟಿಗೆ ಮಿಶ್ರಣವಾದಾಗ ಕಾಮನಬಿಲ್ಲು ರೂಪತಾಳಿದಂತಿರುತ್ತೆ. ಆದರೆ ಭೂಮಿ ವೃತ್ತಾಕಾರದಲ್ಲಿರುವುದರಿಂದ ಇದು ನಮಗೆ ಅರ್ಧ ಮಾತ್ರ ಕಾಣಿಸುತ್ತೆ.
ಹೀಗೆ ವೃತ್ತಾಕಾರದ ಕಾಮನಬಿಲ್ಲಿನ ರೂಪ ನೋಡಿ ನೆಟ್ಟಿಗರೂ ಅದ್ಭುತ ಅಂತ ವರ್ಣಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಡಿಯೋ ಸದ್ದು ಈಗ ಹೆಚ್ಚಾಗಿದೆ.