ನವರಾತ್ರಿಗೆ ತನ್ನದೇ ಆದ ವಿಶಿಷ್ಟ ಧಾರ್ಮಿಕ ಹಿನ್ನೆಲೆ ಇದೆ. ನವರಾತ್ರಿ ಆಚರಣೆಗೆ ಸಂಬಂಧಿಸಿದ ಉಲ್ಲೇಖ ನಮ್ಮ ಅನೇಕ ವೇದ ಪುರಾಣಗಳಲ್ಲಿ ಪುಣ್ಯ ಕಥೆಗಳಲ್ಲಿದೆ. ನವರಾತ್ರಿ ಹೆಸರೇ ಹೇಳುವ ಹಾಗೆ 9 ರಾತ್ರಿಗಳ ಉತ್ಸವ ಮಾಡುವುದು ವಿಶೇಷ. 9 ರಾತ್ರಿಗಳಲ್ಲಿ ದುರ್ಗಿಯ ವಿಶೇಷ ಸ್ವರೂಪಗಳನ್ನು ಪೂಜಿಸುತ್ತಾ ದೇವಿಯನ್ನು ಆರಾಧನೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಗರ್ಬಾ ನೃತ್ಯ ಮಾಡುವುದು ಕೂಡಾ ವಿಶೇಷ.
ರಾಜಸ್ಥಾನ್, ಗುಜರಾತ್ ನಲ್ಲಿ ನವರಾತ್ರಿ ಬಂತು ಅಂದ್ರೆ ಸಾಕು ಭಜನೆ, ಹಾಡು, ನೃತ್ಯ ಕಾಮನ್. ಅದಕ್ಕಾಗಿಯೇ ಹಬ್ಬದ ಮೊದಲೇ ತಯಾರಿ ಮಾಡಲಾಗುತ್ತೆ. ಆದರೆ ಈ ಬಾರಿ ಯುವತಿಯರ ತಂಡವೊಂದು ಗರ್ಬಾ ನೃತ್ಯ ಅಭ್ಯಾಸ ಮಾಡಿರುವ ರೀತಿ ವೈರಲ್ ಆಗಿದೆ.
ಯುವತಿಯರ ತಂಡ ಸ್ವಿಮ್ಮಿಂಗ್ ಪೂಲ್ನಲ್ಲಿ ನಿಂತು ಗರ್ಬಾ ನೃತ್ಯ ಮಾಡುತ್ತಿರುವ ದೃಶ್ಯ ನೀವು ನೋಡಬಹುದು. ಈ ರೀತಿ ಸ್ವಿಮ್ಮಿಂಗ್ ಪೂಲ್ನಲ್ಲಿ ನೃತ್ಯ ಮಾಡುವ ದೃಶ್ಯ ರಾಜಸ್ಥಾನ್ನ ಉದಯ್ಪುರದಲ್ಲಿ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಈಗ ಸೋಶಿಯಲ್ಮೀಡಿಯಾದಲ್ಲಿ ಆಗುತ್ತಿದೆ.
ಈಜುಕೋಳದಲ್ಲಿ ಸೊಂಟದ ಮಟ್ಟದ ನೀರಿನಲ್ಲಿ ಇಳಿದು. ತಾಳಕ್ಕೆ ತಕ್ಕ ಹಾಗೆ ನೃತ್ಯ ಮಾಡುತ್ತಿರುವುದು ವಿಶೇಷ. ಕೊರೊನಾ ನಂತರ ಮಾಡಲಾಗುತ್ತಿರುವ ಗರ್ಬಾ ನೃತ್ಯ ಇದಾಗಿದ್ದು. ಎಲ್ಲರೂ ಫುಲ್ ಜೋಶ್ನಲ್ಲಿ ಈ ಬಾರಿ ನವರಾತ್ರಿ ಹಬ್ಬವನ್ನ ಆಚರಿಸುತ್ತಿರುವುದು ವಿಶೇಷ.