ಮೈಸೂರು: ಕಾಂಗ್ರೆಸ್ ನಾಯಕರ ಪೇಸಿಎಂ ಪೋಸ್ಟರ್ ಅಭಿಯಾನದ ವಿರುದ್ಧ ಮತ್ತೆ ಕಿಡಿಕಾರಿರುವ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಪಕ್ಷ ಅಧಃಪತನ ವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪೇಸಿಎಂ ಅಭಿಯಾನವನ್ನು ಕಾಂಗ್ರೆಸ್ ನವರು ಮಾಡಲಿ. ಅವರು ತನ್ನ ತಟ್ಟೆಯಲ್ಲಿ ಸರಣಿ ಹಗರಣಗಳನ್ನು ಇಟ್ಟುಕೊಂಡು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರು ಈ ರೀತಿ ಡರ್ಟಿ ಅಭಿಯಾನ ಮಾಡುವ ಮೂಲಕ ಡರ್ಟಿ ಪಾಲಿಟಿಕ್ಸ್ ಮಾಡಿ ರಾಜ್ಯದ ಮರ್ಯಾದೆ, ಹೆಸರನು ಕಳೆಯುತ್ತಿದ್ದಾರೆ ಎಂದು ಗುಡುಗಿದರು.
ಪೇಸಿಎಂ ಇದರಲ್ಲಿ ಏನಿದೆ? ಜನರಿಗೆ ಎಲ್ಲವೂ ಗೊತ್ತಿದೆ.ಆಪ್, ಅಂತರ್ಜಾಲದಿಂದ ಕೂತಲ್ಲೇ ಏನೆಲ್ಲಾ ಮಾಡಬಹುದು ಎಂದು ಇಂದು ಸಣ್ಣ ಸಣ್ಣ ಯುವಕರಿಗೂ ಗೊತ್ತಿದೆ. ಇದೊಂದು ಮೋಸದ ಸುದ್ದಿ ಎಂದು ಸ್ಪಷ್ಟವಾಗಿದೆ ಎಂದರು.
ಲಿಂಗಾಯತ ಸಮುದಾಯದ ಸಿಎಂಗಳನ್ನು ಗುರಿ ಮಾಡಲಾಗಿದೆ ಎಂದು ಕೋಪದಲ್ಲಿ ಮಾತನಾಡಿರಬಹುದು. ಆದರೆ ಅದರಲ್ಲಿ ನಾನಿಲ್ಲ.ಸಾರ್ವಜನಿಕರಿಗೆ ಇದು ಅರ್ಥವಾಗುತ್ತದೆ. ಸದನದಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ನವರಿಗೆ ಸಾಕಷ್ಟು ಅವಕಾಶವಿತ್ತು. ಅಲ್ಲಿ ಪ್ರಸ್ತಾಪ ಮಾಡಲು ಅವರ ಬಳಿ ಸರಕಿಲ್ಲ. ಹೀಗಾಗಿ ಕೀಳು ಮಟ್ಟದ ಅಭಿಯಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.