ಬಳ್ಳಾರಿ- ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲು ಶ್ರೀರಾಮುಲು ಕೈಲಿ ಆಗಲಿಲ್ಲ ಎಂದು ಕಾಂಗ್ರೆಸ್ನ ಶಾಸಕ ಬಿ.ನಾಗೇಂದ್ರ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬಳ್ಳಾರಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕೊಡಿಸಲು ಆಗಲಿಲ್ಲ ಎಂದರೆ ಕಾಂಗ್ರೆಸ್ ಗೆ ಬರಲಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಇಂದು ಮಾಧ್ಯಮದವರ ಜೊತೆ ಮಾತನಾಡಿರುವ ನಾಗೇಂದ್ರ ಮೀಸಲಾತಿ ಕೊಡುಸ್ತೀನಿ, ಸಿಹಿ ಸುದ್ದಿ ಕೊಡ್ತೀನಿ ಅನ್ನೋದನ್ನ ಕೇಳಿ ಕೇಳಿಯೇ ಎಲ್ಲರಿಗೂ ಸಕ್ಕರೆ ಕಾಯಿಲೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ರಾಮುಲು ಮಾತು ಕೇಳಲು ಸರ್ಕಾರ ರೆಡಿ ಇಲ್ಲ. ಇವರಿಗೆ ಯಾರೂ ಸಪೋರ್ಟ್ ಮಾಡ್ತಾ ಇಲ್ಲ. ಇವರು ಪ್ರಭಾವಶಾಲಿಯಾಗಿದ್ದರೆ ಮೀಸಲಾತಿ ಕೊಡಿಸಲು
ಇವರ ಕೈಲಿ ಸಾಧ್ಯವಾಗದೇ ಇದ್ದರೆ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ನಮ್ಮ ಪಕ್ಷಕ್ಕೆ ಬರಲಿ ಅಂತ ಹೇಳಿದ್ದಾರೆ.
ಮುಂಬರುವ ಚುನಾವಣೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀರಾಮುಲು ಭಾರೀ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಆ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಈ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.