ಬೆಳಗಾವಿ: ರಮೇಶ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರುಳಿಸುವ ಶಕ್ತಿ ಇದೆ ಎಂದು ಸೋದರ ಹಾಗೂ ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಕಾಲೆಳೆದಿದ್ದಾರೆ.
ಜಾರಕಿಹೊಳಿ ಸೋದರರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ. ರಾಜ್ಯ ರಾಜಕಾರಣದಲ್ಲಿ ನಾವು ನಾಲ್ವರು ಸಹೋದರರು ಇದ್ದೇವೆ. ನಾವು ನಾಲ್ಕು ಮಂದಿ ಒಂದೇ ಎಂದು ಭಾವಿಸಬಾರದು. ನಾಲ್ವರೂ ಸಹೋದರರ ಕೆಲಸವೂ ಬೇರೆ ಇದೆ. ಕನ್ಫ್ಯೂಸ್ ಆಗಬೇಡಿ. ರಮೇಶ ಜಾರಕಿಹೊಳಿಗೆ ಮಾತ್ರ ಸರ್ಕಾರ ಉರುಳಿಸುವ ಶಕ್ತಿ ಇದೆ. ಉಳಿದ ಸಹೋದರರು ಸರ್ಕಾರ ಪತನದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.
ಅವರು ಮತ್ತೆ ಸರ್ಕಾರ ಉರುಳಿಸುವ ಪ್ರಯತ್ನ ಮಾಡಲೆಂದು ಪ್ರಾರ್ಥಿಸೋಣ ಎಂದು ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.