ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ದಂಪತಿಗಳ ಪೈಕಿ ತಮಿಳಿನ ನಟಿ ಮಹಾಲಕ್ಮಿ ಹಾಗೂ ರವೀಂದರ್. ಈ ಜೋಡಿ ಮದುವೆಯಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿದೆ. ಇದೀಗ ಈ ಜೋಡಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದೆ.
ಹೌದು. ಈ ಜೋಡಿಯ ಫೋಟೋಗಳು ಮದುವೆ ಆದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಕಾಣಿಸುತ್ತಲೇ ಇದೆ. ಅಷ್ಟೆ ಯಾಕೆ, ಸ್ವತಃ ರವೀಂದರ್ ಅವರೇ ಒಂದಿಷ್ಟು ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಹೆಂಡತಿಯ ಬಗೆಗಿನ ಒಂದಿಷ್ಟು ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಇದೀಗ ದೇವಸ್ಥಾನಕ್ಕೆ ಈ ಜೋಡಿ ಹೋಗಿರುವ ಫೋಟೋ ವೈರಲ್ ಆಗಿದೆ.
ಮದುವೆಯ ಬಳಿಕ ಈ ಜೋಡಿ ಟೆಂಪಲ್ ರನ್ ಮಾಡುತ್ತಿದೆ. ಇದರ ಮುಂದುವರೆದ ಭಾಗವಾಗಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ. ಯಾವ ಕೆಟ್ಟ ಕಣ್ಣು ನಮ್ಮ ಜೋಡಿ ಮೇಲೆ ಬೀಳದೇ ಇರಲಿ ಅಂತ ದೇವರ ಮೊರೆ ಹೋಗಿದ್ದಾರೆ.