ಸಾರ್ವಜನಿಕ ಪ್ರದೇಶದಲ್ಲಿ, ಪರಿಚಯವಿಲ್ಲದ ಸ್ಥಳದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡುವುದು ಅಥವಾ ಗಮನ ಸೆಳೆಯುವ ಚಟುವಟಿಕೆ ನಡೆಸುವುದು ಅಷ್ಟು ಸಲೀಸಲ್ಲದ ಕೆಲಸ.
ಆದರೆ, ಇತ್ತೀಚೆಗೆ ಇದು ಟ್ರೆಂಡ್ ಆಗುತ್ತಿದೆ. ಬೇರೆಯರ ವಿಚಾರ ನಮಗೇಕೆ ಎಂದು ತಮಗನಿಸಿದ್ದನ್ನು ಮಾಡುವ ಉದಾಹರಣೆ ಸಾಕಷ್ಟಿದೆ. ಇತ್ತೀಚೆಗೆ ಚಲಿಸುತ್ತಿರುವ ದೆಹಲಿ ಮೆಟ್ರೋ ರೈಲಿನಲ್ಲಿ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡ್ಯಾನ್ಸ್ ಮಾಡುವುದನ್ನು ಆಕೆಯ ಸ್ನೇಹಿತೆ ರೆಕಾರ್ಡ್ ಮಾಡಿದ್ದಾರೆ. ಇವರಿಬ್ಬರ ಈ ಸಾಹಸವನ್ನು ಇನ್ನೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕ್ಲಿಪ್ ಅನ್ನು ಥಿನ್ಲೇ ಭುಟಿಯಾ ಎಂಬುವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ಯಾಮೆರಾದ ಮುಂದೆ ಅವಳ ಸ್ನೇಹಿತ ನೃತ್ಯವನ್ನು ಪ್ರಾರಂಭಿಸಲು ಕೌಂಟ್ಡೌನ್ ನೀಡುತ್ತಿರುವಾಗ ಹುಡುಗಿ ಮೆಟ್ರೋದ ಕಂಪಾರ್ಟ್ಮೆಂಟ್ನ ಮಧ್ಯದಲ್ಲಿ ನಿಂತಿರುವುದನ್ನು ಕಾಣಬಹುದು. ಜನಸಮೂಹದ ಗಿಜಿಗಿಜಿ ಕೂಡ ಅಲ್ಲಿ ಕೇಳಿಸುತ್ತದೆ. ಅದರ ನಡುವೆಯೂ ಕ್ಷೀಣವಾಗಿ ಕೇಳಿಸಬಹುದಾದ ಹಾಡಿಗೆ ಆಕೆ ಕುಣಿಯುತ್ತಾಳೆ. ಅಲ್ಲಿದ್ದ ಕೆಲವರು ಇದನ್ನು ನೋಡುತ್ತಿದ್ದರೂ ಅದರ ಬಗ್ಗೆ ಆ ಹುಡುಗಿ ತಲೆ ಕೆಡಿಸಿಕೊಂಡಿಲ್ಲ. ಈ ಪೋಸ್ಟ್ಗೆ “ಇದು ಆತ್ಮವಿಶ್ವಾಸ” ಎಂದು ಶೀರ್ಷಿಕೆ ನೀಡಲಾಗಿದೆ.
ಅಂತಹ ರೀಲ್ಗಳನ್ನು ರೆಕಾರ್ಡಿಂಗ್ ಮಾಡುವ ಕ್ರೇಜ್ ಬಗ್ಗೆ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸಾರ್ವಜನಿಕವಾಗಿ ಅಂತಹದನ್ನು ರೆಕಾರ್ಡ್ ಮಾಡುವ ವಿಶ್ವಾಸ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನಾನು ಅಂತಹ ಜನನಿಬಿಡ ಸ್ಥಳದಲ್ಲಿ ಮುಂಭಾಗದ ಕ್ಯಾಮರಾವನ್ನು ತೆರೆದರೆ, ಆತಂಕ ಶುರುವಾಗುತ್ತದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಮಾತ್ರ ಹಾಸ್ಯಮಯವಾಗಿ ಕಾಮೆಂಟ್ಮಾಡಿ, ರೆೈಲಿನ ಪ್ರಯಾಣಿಕರ ಬಗ್ಗೆ ನನಗೆ ಕರುಣೆ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.