ನವದೆಹಲಿ: ದೇಶಾದ್ಯಂತ ಏಕಕಾಲದಲ್ಲಿ ನಡೆದ ದಾಳಿಯ ಬಗ್ಗೆ ಎನ್.ಐ.ಎ. ಮಾಹಿತಿ ನೀಡಿದೆ. ರಾಷ್ಟ್ರೀಯ ತನಿಖಾ ದಳದಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಪಿಎಫ್ಐ ಗೆ ಸೇರಿದ 25 ಸ್ಥಳಗಳು ಸೇರಿ 93 ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಅಪಾರ ಪ್ರಮಾಣದ ದಾಖಲೆ, ನಗದು ವಶಕ್ಕೆ ಪಡೆಯಲಾಗಿದೆ. 45 ಮಂದಿಯನ್ನು ಬಂಧಿಸಲಾಗಿದೆ. ಮಾರಕಾಸ್ತ್ರಗಳು ಡಿಜಿಟಲ್ ಸಾಕ್ಷಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದಲ್ಲಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಅನೀಸ್ ಅಹ್ಮದ್, ಅಫ್ಸರ್ ಪಾಷಾ, ಶಾಕೀಬ್, ಅಬ್ದುಲ್ ವಾಹಿದ್ ಸೇಠ್, ಯಾಸಿರ್ ಅರಾಫತ್, ಫಾರೂಕ್ ರೆಹಮಾನ್, ಶಾಹಿದ್ ನಾಸಿರ್ ಎಂಬುವರನ್ನು ಬಂಧಿಸಲಾಗಿದೆ.
ಕೇರಳದಲ್ಲಿ 19, ತಮಿಳುನಾಡಿನಲ್ಲಿ 11, ಆಂಧ್ರಪ್ರದೇಶದಲ್ಲಿ 4, ರಾಜಸ್ಥಾನದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ತೆಲಂಗಾಣ ಮತ್ತು ಉತ್ತರ ಪ್ರದೇಶದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.