ರಾಜಸ್ಥಾನ ವಿಧಾನಸಭೆಗೆ ಶಾಸಕ ಹಸುವಿನೊಂದಿಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ಹಸುವಿನ ಜೊತೆ ಆಗಮಿಸಿದ್ದು, ಚರ್ಮ ಗಂಟು ಕಾಯಿಲೆಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಆದರೆ, ಸಚಿವರು ವಿಧಾನಸೌಧದ ಆವರಣಕ್ಕೆ ಅದನ್ನು ಕರೆತರುವ ವೇಳೆ ಅದು ಓಡಿಹೋಯಿತು.
ರಾವತ್ ಅಸೆಂಬ್ಲಿ ಗೇಟ್ನ ಹೊರಗೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಹಸು ತನ್ನನ್ನು ಕಟ್ಟಿದ್ದ ಹಗ್ಗವನ್ನು ಎಳೆದುಕೊಂಡು ಸ್ಥಳದಿಂದ ಓಡಿಹೋಯಿತು. ಟ್ವೀಟ್ನಲ್ಲಿ ರಾವತ್, “ಈ ಸಂವೇದನಾಶೀಲ ಸರ್ಕಾರದ ವಿರುದ್ಧ ಹಸು ಕೂಡ ಕೋಪಗೊಂಡಿದೆ” ಎಂದು ವ್ಯಂಗ್ಯಮಾಡಿ ಕಾಮೆಂಟ್ ಮಾಡಿದ್ದಾರೆ.
ಕೆೈಯಲ್ಲಿ ಕೋಲು ಹಿಡಿದುಕೊಂಡು ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಹಸುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿವೆ. ಆದರೆ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿದೆ. ಚರ್ಮ ಗಂಟು ಕಾಯಿಲೆಯ ಬಗ್ಗೆ ಗಮನ ಸೆಳೆಯಲು, ನಾನು ಹಸುವನ್ನು ವಿಧಾನಸೌಧಕ್ಕೆ ತಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳ ಪ್ರಕಾರ, 59,027 ಜಾನುವಾರುಗಳು ಚರ್ಮಗಂಟು ಕಾಯಿಲೆಯಿಂದ ಸಾವನ್ನಪ್ಪಿವೆ, 13,02,907 ಬಾಧಿತವಾಗಿವೆ.