ತವರಿನಿಂದ ಪತ್ನಿ ಹಿಂತಿರುಗಲಿಲ್ಲವೆಂದು ಪತಿರಾಯನೊಬ್ಬ ಹೈ ಟೆನ್ಶನ್ ಟವರ್ ಏರಿಕುಳಿತ ಪ್ರಸಂಗ ನಡೆದಿದೆ.
ಛತ್ತೀಸ್ಗಢದ ಭಿಲಾಯ್ನ ಗನಿಯಾರಿ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪತ್ನಿ ತನ್ನೊಂದಿಗೆ ಬರಲು ನಿರಾಕರಿಸಿದ್ದರಿಂದ ಬೇಸರಗೊಂಡು ಮೊಬೈಲ್ ಟವರ್ ಏರಿದಾತನನ್ನು ಹೊರಿ ಲಾಲ್ ಎಂದು ಗುರುತಿಸಲಾಗಿದೆ.
ಆತ ತನ್ನ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಅತ್ತೆಯ ಮನೆಗೆ ಬಂದಿದ್ದನು, ಆದರೆ ಮಾವ ಅವನ ಬೇಡಿಕೆಯನ್ನು ನಿರಾಕರಿಸಿದ. ಇದರಿಂದ ಕೋಪಗೊಂಡ ಹೊರಿಲಾಲ್ ಹೆಂಡತಿಯ ಪೋಷಕರ ಮೇಲೆ ಒತ್ತಡ ಹೇರಲು 75 ಅಡಿ ಎತ್ತರದ ಹೈಟೆನ್ಷನ್ ಟವರ್ ಏರಿದ್ದಾನೆ. ಇಡೀ ನಾಟಕೀಯ ಬೆಳವಣಿಗೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಯನ್ನು ಕೆಳಗೆ ಬರುವಂತೆ ಮನಮೊಲಿಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಪೊಲೀಸರು ಪತ್ನಿಯನ್ನು ವಾಪಸ್ ಕರೆಸುವುದಾಗಿ ಭರವಸೆ ನೀಡಿ ಮನವರಿಕೆ ಮಾಡಿ ಟವರ್ನಿಂದ ಕೆಳಗಿಳಿದಿದ್ದಾರೆ. ಆತ ಟವರ್ನಿಂದ ಇಳಿದ ನಂತರ ಭಿಲಾಯಿ ಪೊಲೀಸರು ಹೊರಿಲಾಲ್ನನ್ನು ತಮ್ಮೊಂದಿಗೆ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.