ವಿಧಾನ ಪರಿಷತ್ ನಲ್ಲಿ ಮಹಾಭಾರತ ಪ್ರಸ್ತಾಪಿಸಿರುವ ಸದಸ್ಯ ಪ್ರಾಣೇಶ್, ಭರತ ಖಂಡ ಸಂಕಷ್ಟದಲ್ಲಿದ್ದಾಗ ನಾನು ಪುನರ್ಜನ್ಮ ತಾಳುವೇ ಎಂದು ಶ್ರೀ ಕೃಷ್ಣ ಹೇಳಿದ್ದ. ಈಗ ಭಾರತಕ್ಕೆ ಸಂಕಷ್ಟ ಬಂದಿದ್ದು, ಹೀಗಾಗಿ ಕೃಷ್ಣನ ರೂಪದಲ್ಲಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಬಣ್ಣಿಸಿದ್ದಾರೆ.
ಬುಧವಾರದಂದು ಮಾತನಾಡಿದ ಅವರು, ಯೋಜನೆಗಳನ್ನು ನಮ್ಮ ಪೂರ್ವಿಕರು ಭವಿಷ್ಯದ ದೃಷ್ಟಿಯಿಂದ ಜಾರಿಗೊಳಿಸುತ್ತಿದ್ದರು. ಆದರೆ ನಾವುಗಳು ಕೇವಲ ತಾತ್ಕಾಲಿಕ ಯೋಜನೆಗಳನ್ನು ಮಾತ್ರ ತರುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಭಾರತ ಕುರಿತು ಮಾತನಾಡಿದ ಅವರು, ಕೃಷ್ಣನ ರೂಪದಲ್ಲಿ ನರೇಂದ್ರ ಮೋದಿ ಬಂದಿದ್ದಾರೆ ಎಂದು ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮೋದಿ ಅವರ ವಿಷಯವಿರಲಿ. ಮೊದಲು ಮೋರಿ ಕ್ಲೀನ್ ಮಾಡಲಿ ಎಂದು ಹೇಳಿದರು.