alex Certify ವೃದ್ಧ ಪತಿಗೆ ಪ್ರೀತಿಯಿಂದ ತುತ್ತು ಉಣಿಸಿದ ಅಜ್ಜಿ; ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧ ಪತಿಗೆ ಪ್ರೀತಿಯಿಂದ ತುತ್ತು ಉಣಿಸಿದ ಅಜ್ಜಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ವೃದ್ಧ ದಂಪತಿಗಳ ನಡುವಿನ ಪ್ರೀತಿಯನ್ನು ಪ್ರದರ್ಶಿಸುವ ವೀಡಿಯೊಗಳು ಯಾವಾಗಲೂ ವೀಕ್ಷಿಸಲು ಹೃದಯಸ್ಪರ್ಶಿಯಾಗಿರುತ್ತವೆ.
ದಂಪತಿ ಒಬ್ಬರಿಗೊಬ್ಬರು ಬೆಳೆಯುವುದರ ಬಗ್ಗೆ ಮತ್ತು ಜೀವಿತಾವಧಿಯನ್ನು ಬಹುಕಾಲ ಒಟ್ಟಿಗೆ ಕಳೆಯುವುದು ವಿಶೇಷ ಸಂಗತಿ. ವಯಸ್ಸಾದ ದಂಪತಿಗಳ ನಡುವಿನ ಪ್ರೀತಿ ಮತ್ತು ಕಾಳಜಿಯನ್ನು ಪ್ರದರ್ಶಿಸುವ ಇಂತಹ ಸ್ವೀಟ್​ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೆೈರಲ್​ ಆಗುತ್ತಿದೆ.

ಐಎಎಸ್​ ಡಾ ಸುಮಿತಾ ಮಿಶ್ರಾ ಅವರು ಟ್ವಿಟರ್​ನಲ್ಲಿ ಹೃದಯಸ್ಪರ್ಶಿ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವೀಡಿಯೊದಲ್ಲಿ, ದಂಪತಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು, ವೃದ್ಧ ಮಹಿಳೆ ತನ್ನ ಪತಿಗೆ ಪ್ರೀತಿಯಿಂದ ಆಹಾರ ಮತ್ತು ನೀರನ್ನು ನೀಡುತ್ತಾಳೆ. ವಿಡಿಯೋ ಹಿನ್ನಲೆಯಲ್ಲಿ ‘ಏಕ್​ ಪ್ಯಾರ್​ ಕಾ ನಗ್ಮಾ ಹೈ’ ಹಾಡು ಪ್ಲೇ ಆಗುವುದನ್ನು ಕೇಳಬಹುದು.

ದಂಪತಿಗಳ ನಡುವಿನ ಭಾವನಾತ್ಮಕ ಬಂಧವನ್ನು ವೀಕ್ಷಿಸಿದ ನೆಟ್ಟಿಗರಿಗಿದು ಮಹತ್ವದ ವಿಡಿಯೋ ಎನಿಸಿದೆ. ಅನೇಕರು ಕಾಮೆಂಟ್​ ಮಾಡಿ, ಒಬ್ಬರನ್ನೊಬ್ಬರು ಹೊಂದಲು ತುಂಬಾ ಅದೃಷ್ಟವಂತರು ಎಂದು ಹೇಳಿದರು, ಅದನ್ನು ನಿಜವಾದ ಪ್ರೀತಿ ಎಂದು ಕರೆದಿದ್ದಾರೆ.
ವೀಡಿಯೊವು 612ಕೆ ಕ್ಕಿಂತ ಹೆಚ್ಚು ವೀಕ್ಷಣೆ ಕಂಡಿದ್ದು, 5000 ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ.

ಜೀವನದಲ್ಲಿ ನಾವು ಸಾಯುವವರೆಗೂ ಒಟ್ಟಿಗೆ ಇರುವ ಅಂತಹ ಒಡನಾಡಿಯನ್ನು ಬಯಸುತ್ತೇವೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...