ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪಾಕ್; ಮುಗಿಲುಮುಟ್ಟಿದ ಪೆಟ್ರೋಲ್ ದರ 21-09-2022 12:28PM IST / No Comments / Posted In: Featured News, Live News, International ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಪ್ರಸ್ತುತ ಹಣದುಬ್ಬರವನ್ನು ಎದುರಿಸುತ್ತಿದೆ. ಇಂದು ಪಾಕಿಸ್ತಾನ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 1.45 ಪಿಕೆಆರ್ ಏರಿಕೆ ಮಾಡಿದ್ದು, ಈ ಮೂಲಕ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ದರವು ಪಾಕಿಸ್ತಾನ ಕರೆನ್ಸಿ 237.43 ರೂಪಾಯಿ ಆಗಿದೆ. ಜಾಗತಿಕ ತೈಲ ಬೆಲೆಗಳ ಏರಿಳಿತ ಮತ್ತು ವಿನಿಮಯ ದರದ ವ್ಯತ್ಯಾಸದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ದೇಶದ ಹೆಚ್ಚಿನ ಭಾಗಗಳು ಮುಳುಗಿದ್ದು 1500 ಮಂದಿ ಸಾವಿಗೆ ಕಾರಣವಾಗಿತ್ತು. ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹದಿಂದಾಗಿ 33 ಮಿಲಿಯನ್ ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಕೆಳಗಿಳಿಸಿದ ಬಳಿಕ ದೇಶದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯು ದೇಶವನ್ನು ಆರ್ಥಿಕ ದೃಷ್ಟಿಯಿಂದಲೂ ಕುಸಿಯುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ಪ್ರವಾಹದ ನೀರು ಕಡಿಮೆಯಾಗಲು ಇನ್ನೂ ಎರಡರಿಂದ ಆರು ತಿಂಗಳು ಸಮಯ ಬೇಕು ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಂತ ನೀರಿನಿಂದಾಗಿ ದೇಶದಲ್ಲಿ ಮಲೇರಿಯಾ, ಡೆಂಗ್ಯೂ, ಜ್ವರ, ಚರ್ಮ ಹಾಗೂ ಕಣ್ಣಿನ ಸೋಂಕುಗಳು ಮತ್ತು ತೀವ್ರ ಅತಿಸಾರದಂತಹ ಕಾಯಿಲೆಗಳು ಹುಟ್ಟಿಕೊಳ್ಳುತ್ತಿದೆ. Prices of petroleum products have been revised. pic.twitter.com/bfqBMnPyIi — Ministry of Finance, Government of Pakistan (@Financegovpk) September 20, 2022