ಸೆಪ್ಟೆಂಬರ್ 23ರಂದು ರಾಷ್ಟ್ರೀಯ ಸಿನಿಮಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಅಂದು ಮಲ್ಟಿ ಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ಕೇವಲ 75 ರೂಪಾಯಿಗಳಾಗಿರಲಿದೆ.
ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳು ಅತಿ ದೊಡ್ಡ ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಚಿತ್ರಮಂದಿರಗಳತ್ತ ಜನರನ್ನು ಮತ್ತೆ ಸೆಳೆಯುವ ಸಲುವಾಗಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 23 ರಂದು ಪಿವಿಆರ್, ಐನಾಕ್ಸ್, ಸಿನಿಪೊಲೀಸ್, ಕಾರ್ನಿವಲ್, ಮಿರಾಜ್, ಸಿಟಿ ಪ್ರೈಡ್, ಆಸಿಯಾನ್, ಮೂವಿ ಟೈಮ್, ವೇವ್ ಮೊದಲಾದ ಮಲ್ಟಿಪ್ಲೆಕ್ಸ್ ಗಳ 4000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಟಿಕೆಟ್ ದರ 75 ರೂಪಾಯಿ ನಿಗದಿಯಾಗಿರಲಿದೆ.