ಭಾರತದಲ್ಲಿ ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಮದುವೆಯ ಮೊದಲ ರಾತ್ರಿ ವರನಿಗೆ ವಧು ಹಾಲು ಕೊಡುತ್ತಾಳೆ. ಅದ್ರಲ್ಲೂ ಬಾದಾಮಿ-ಕೇಸರಿಯುಕ್ತ ಹಾಲನ್ನು ವಧು, ವರನಿಗೆ ಕೊಡುವ ಪದ್ಧತಿಯಿದೆ. ಅಂದಿನಿಂದ ಇಂದಿನವರೆಗೂ ಈ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗ್ತಿದೆ. ಆದ್ರೆ ಬಹುತೇಕರಿಗೆ ಮೊದಲ ರಾತ್ರಿ ಹಾಲನ್ನು ಏಕೆ ಕುಡಿಯಬೇಕೆಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲ.
ಹಿಂದೂ ಕುಟುಂಬದಲ್ಲಿ ಹುಟ್ಟಿದವರು ಮೊದಲ ರಾತ್ರಿ ವಧು-ವರರಿಗೆ ಹಾಲನ್ನು ನೀಡುವುದನ್ನು ನೋಡಿರುತ್ತಾರೆ. ಹಿಂದೂ ಧರ್ಮದಲ್ಲಿ ಹಾಲೊಂದು ಪವಿತ್ರ ಪಾನೀಯ. ಮದುವೆ ಕೂಡ ಒಂದು ಶುದ್ಧ ಸಂಬಂಧ. ಶುದ್ಧ ಸಂಬಂಧ ಮತ್ತಷ್ಟು ಶುದ್ಧವಾಗಿರಲಿ ಎನ್ನುವ ಕಾರಣಕ್ಕೆ ಮೊದಲ ರಾತ್ರಿ ಹಾಲನ್ನು ನೀಡ್ತಾರೆ ಎಂಬ ನಂಬಿಕೆಯಿದೆ.
ಈ ನಂಬಿಕೆ ಸುಳ್ಳಲ್ಲ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದ್ರೆ ಮೊದಲ ರಾತ್ರಿ ಹಾಲನ್ನು ನೀಡುವ ಪದ್ಧತಿ ಹಿಂದೆ ಮತ್ತೊಂದು ಉದ್ದೇಶವಡಗಿದೆ. ಆಯುರ್ವೇದದ ಪ್ರಕಾರ ಹಾಲಿನಲ್ಲಿ ಸಂತಾನೋತ್ಪತ್ತಿ ಕೋಶವನ್ನು ಉತ್ತೇಜನಗೊಳಿಸುವ ಸತ್ವವಿದೆ. ಹಾಗಾಗಿ ಹಾಲನ್ನು ಕಾಮೋತ್ತೇಜಕ ಪಾನೀಯವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮೊದಲ ರಾತ್ರಿ ವರನಿಗೆ ಹಾಲನ್ನು ನೀಡಲಾಗುತ್ತದೆ.
ಹಾಲಿನಲ್ಲಿ ದೇಹವನ್ನು ಉತ್ತೇಜಿಸುವ ಶಕ್ತಿಯಿದೆ. ಹಾಲು ದೇಹವನ್ನು ನಿಯಂತ್ರಿಸುತ್ತದೆ ಕೂಡ. ಹಾಲಿಗೆ ಗಿಡಮೂಲಿಕೆ ಅಥವಾ ಕೇಸರಿ, ಬಾದಾಮಿ ಬೆರೆಸಿ ನೀಡಿದ್ರೆ ಅದು ದೇಹಕ್ಕೆ ಶಕ್ತಿ ನೀಡಿ ಪೌಷ್ಠಿಕಾಂಶವನ್ನು ಹೆಚ್ಚಿಸುತ್ತದೆ.
ಹಾಲು ಪುರುಷರನ್ನು ಲೈಂಗಿಕವಾಗಿ ಸಕ್ರಿಯಗೊಳಿಸುತ್ತದೆ. ಮೊದಲ ರಾತ್ರಿ ದೇಹ ಹಾಗೂ ಮನಸ್ಸು ಉತ್ಸಾಹಿತವಾಗಿರಲು ಹಾರ್ಮೋನ್ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ. ಹಾಲು ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ.