7ನೇ ವೇತನ ಆಯೋಗದ ಇತ್ತೀಚಿನ ಅಪ್ಡೇಟ್ ಪ್ರಕಾರ -ಸೆಪ್ಟೆಂಬರ್ ಅಂತ್ಯದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಲಿದೆ.
ಮಾಹಿತಿಗಳ ಪ್ರಕಾರ ನವರಾತ್ರಿಯ ಶುಭ ಸಂದರ್ಭದಲ್ಲಿ ತುಟ್ಟಿಭತ್ಯೆ ಹೆಚ್ಚಳ ಕುರಿತು ಸರ್ಕಾರದ ದೊಡ್ಡ ಘೋಷಣೆ ಹೊರಬೀಳಲಿದೆ.
ನವರಾತ್ರಿಯ ಸಮಯದಲ್ಲಿ ಅಂದರೆ ಸೆಪ್ಟೆಂಬರ್ 28 ರಂದು ತುಟ್ಟಿಭತ್ಯೆಯ ಬಗ್ಗೆ ಘೋಷಣೆ ಹೊರಬೀಳಲಿದೆ ಎಂದು ನಿಖರವಾಗಿ ಹೇಳಲಾಗುತ್ತಿದೆಯಾದರೂ ಸರ್ಕಾರವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು. ಇದರರ್ಥ ಒಟ್ಟು ಡಿಎ 38 ಪ್ರತಿಶತವನ್ನು ತಲುಪಬಹುದು. ಜೊತೆಗೆ, ನೌಕರರು ಜುಲೈ ಮತ್ತು ಆಗಸ್ಟ್ ತಿಂಗಳ ಹಿಂಬಾಕಿಯನ್ನು ಸಹ ಪಡೆಯಬಹುದು.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಮೊದಲನೆಯದನ್ನು ಜನವರಿಯಿಂದ ಜೂನ್ ವರೆಗೆ ನೀಡಲಾಗುತ್ತದೆ, ಎರಡನೆಯದು ಜುಲೈನಿಂದ ಡಿಸೆಂಬರ್ ವರೆಗೆ ಬರುತ್ತದೆ.
2022 ರ ವರ್ಷದ ತುಟ್ಟಿಭತ್ಯೆಯ ಮೊದಲ ಹೆಚ್ಚಳವನ್ನು ಮಾರ್ಚ್ನಲ್ಲಿ ಘೋಷಿಸಲಾಯಿತು.