ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಕ್ಕೆ ಈಗ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ತುಂಬಿ ಹರಿಯುತ್ತಿದ್ದ ಕಾಲುವೆ ಬಳಿ ಸೆಲ್ಫಿ ತೆಗೆಯಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ರಾಯಚೂರು ತಾಲೂಕಿನ ಕಲ್ಮಲ ಬಳಿ ಈ ಘಟನೆ ನಡೆದಿದ್ದು ತುಂಬಿ ಹರಿಯುತ್ತಿದ್ದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ಸೆಲ್ಫಿ ತೆಗೆಯಲು ಹೋದ 19 ವರ್ಷದ ಸುಜಿತ್ ಮತ್ತು ವೈಭವ್ ಎಂಬ ವಿದ್ಯಾರ್ಥಿಗಳು ಸಾವನ್ನಪ್ಪಿದವರಾಗಿದ್ದಾರೆ.
ಭಾನುವಾರದಂದು ಇವರುಗಳು ತಮ್ಮ ಇಬ್ಬರು ಸ್ನೇಹಿತರಾದ ನಾಗೇಂದ್ರ ಮತ್ತು ತರುಣ್ ಜೊತೆ ಕಾಲುವೆ ವೀಕ್ಷಣೆಗೆ ಹೋಗಿದ್ದು, ಸೆಲ್ಫಿ ತೆಗೆಯುತ್ತಿದ್ದಾಗ ನಾಲ್ವರೂ ನೀರಿಗೆ ಬಿದ್ದಿದ್ದಾರೆ. ನಾಗೇಂದ್ರ ಮತ್ತು ತರುಣ್ ಈಜಿ ದಡ ಸೇರಿದರೆ ಈ ಇಬ್ಬರು ಕೊಚ್ಚಿಕೊಂಡು ಹೋಗಿದ್ದು, ಇವರುಗಳ ಶವ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.