ಪ್ರಕೃತಿ ಮಧ್ಯದಲ್ಲಿ, ಹಚ್ಚ ಹಸಿರಿನ ನಡುವೆ ಯಾವತ್ತಾದ್ರೂ ಸಮಯ ಕಳೆದಿದ್ದಿರಾ..? ದೇಹಕ್ಕೆ ಮನಸ್ಸಿಗೆ ಸಿಗೋ ಖುಷಿಯೇ ಬೇರೆ. ಕೆಲವರು ಈ ರೀತಿಯ ಅನುಭವಕ್ಕಂತಾನೇ ಸಮಯವನ್ನ ಮೀಸಲಾಗಿಟ್ಟಿರುತ್ತಾರೆ. ಆಗಾಗ ಟ್ರೆಕ್ಕಿಂಗ್ ಹೋಗಿ ರಿಲ್ಯಾಕ್ಸ್ ಆಗೋರು ತುಂಬಾ ಜನ ಇದ್ದಾರೆ. ಹೀಗೆ ಟ್ರೆಕ್ಕಿಂಗ್ ಅಂತ ಹೋದ ಮಹಿಳೆಗೆ ಒಂದು ವಿಶೇಷ ಅನುಭವವಾಗಿದೆ. ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಇಲ್ಲಿ ಕಾಡಿನ ಮಧ್ಯ, ಹಸಿರ ಸಿರಿಯ ನಡುವೆ ಮಹಿಳೆ, ತನ್ನ ಪಾಡಿಗೆ ತಾನು ಓಡಿ ಬರುತ್ತಿರುವುದನ್ನ ಕಾಣಬಹುದು. ಇದರಲ್ಲಿ ಏನ್ ವಿಶೇಷ ಇದೆ ಅಂತಿರಾ….. ಇದೇ ಕಣ್ರೀ ಈ ವಿಡಿಯೋ ದಲ್ಲಿ ಆಕೆ ಓಡಿ ಬರ್ತಿದ್ದ ಹಾಗೆ ಆಕೆಯ ಹಿಂದೆ ಇರೋ ಕುರಿ ಹಿಂಡುಗಳನ್ನ ನೋಡಿ. ಈ ವಿಡಿಯೋ ನೋಡೋದೇ ಒಂದು ಖುಷಿ
ಅಂದಹಾಗೆ ಇದು ನಡೆದದ್ದು ಫ್ರಾನ್ಸ್ ನಲ್ಲಿ.
ಎಲಿಯಾನರ್ ಸ್ಕೋಲ್ಜ್ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಕೆಳಗೆ “ಇದು ನಾನು ನೋಡಿದ ಅತ್ಯುತ್ತಮ ಸಂಗತಿ, ಈ ಕುರಿಗಳು ಆಕೆಯನ್ನು ಬೆನ್ನಟ್ಟಿವೆ ಅಂತ ನೀವು ಭಾವಿಸುತ್ತೀರಾ?” ಅನ್ನೋ ಕ್ಯಾಪ್ಶನ್ ನೀಡಿದ್ದಾರೆ. ಫ್ರಾನ್ಸ್ ನಲ್ಲಿ ಏಕಾಂಗಿಯಾಗಿ ಪಾದಯಾತ್ರೆ ಮಾಡೋವಾಗ ಮಿಸ್ ಸ್ಕೋಲ್ಜ್ ಅವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಇದು ಪರ್ವತಗಳಲ್ಲಿ ಓಟಗಾರರೊಬ್ಬರನ್ನ ನೂರಕ್ಕೂ ಹೆಚ್ಚು ಕುರಿಗಳಿರುವ ದೊಡ್ಡ ಹಿಂಡು ಹಿಂಬಾಲಿಸುತ್ತಿರುವುದನ್ನು ತೋರಿಸುತ್ತದೆ.
ಫ್ರಾನ್ಸ್‌ನಲ್ಲಿ ನಾನು ಏಕಾಂಗಿಯಾಗಿ ತಿರುಗುತ್ತಿದ್ದಾಗ ನಾನು ಎದುರಿಸಿದ ವಿಶಿಷ್ಟ ಅನುಭವ ಇದು. ಈ ಅನುಭವದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲೇ ಆಗಲಿಲ್ಲ ಎನ್ನುತ್ತಾರೆ ಮಿಸ್ ಸ್ಕೋಲ್ಜ್. ತಾನು ನಿಂತರೆ ಅವು ಕೂಡಾ ನಿಲ್ಲುತ್ತಿದ್ದವು. ಓಡಿದರೆ ಅವು ಕೂಡಾ ಓಡುತ್ತಿದ್ದವು. ಅವುಗಳು ನಾನು ಹೇಗೆ ಮಾಡುತ್ತಿದ್ದೇನೋ ಅವು ಕೂಡಾ ಹಾಗೆಯೇ ನಡೆದುಕೊಳ್ಳುತ್ತಿದ್ದವು. ಅದು ಕೂಡಾ ಒಂದೆರಡು ಕುರಿಗಳು ಅಲ್ಲ ಇಡೀ ಕುರಿಯ ಹಿಂಡೇ ಆಕೆಯಂತೆಯೇ ನಡೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದಾಗಿನಿಂದ 11.8 ಮಿಲಿಯನ್ ಜನರು ನೋಡಿದ್ದಾರೆ. ಅಲ್ದೇ 6.9 ಲಕ್ಷ ಲೈಕ್ ಪಡೆದಿದೆ. ಇನ್ನು ಈ ವಿಡಿಯೋಕ್ಕೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ಕೆಲವರು ಖುಷಿ ಪಟ್ಟು ಕಾಮೆಂಟ್ ಹಾಕಿದರೆ ಇನ್ನೂ ಕೆಲವರು ಇದನ್ನು ಟೀಕೆ ಮಾಡಿದ್ದಾರೆ. ಹಾಗೆ ಕಾಮೆಂಟ್ ಮಾಡಿದವರಲ್ಲಿ ಒಬ್ಬರು ಇದು ಎಂದೆಂದಿಗೂ ಹುಚ್ಚುತನದ ಸಂಗತಿಯಾಗಿದೆ. ಅವರು ಎಷ್ಟು ಮೈಲಿ ಓಡಿದ್ದಾರೆ ಎಂಬ ಯಾವುದಾದರೂ ವಿಡಿಯೊ ಇದ್ದರೆ ನಾನು ಆಶ್ಚರ್ಯ ಪಡುತ್ತೇನೆʼ ಎಂದಿದ್ದಾರೆ.
ಇನ್ನೆಷ್ಟೋ ಜನ ಈ ಕುರಿಗಳ ಹಿಂಡು ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಲ್ಲದೆ ಮಹಿಳೆಯನ್ನೇ ಹಿಂಬಾಲಿಸುವ ಅಷ್ಟೊಂದು ಕುರಿಗಳನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ.