ನಿಷೇಧಿತ ಮಾವೋವಾದಿಗಳ ಚಟುವಟಿಕೆಗಳು ಈಗ ಮತ್ತೆ ಒಮ್ಮಿಂದೊಮ್ಮೆ ಹೆಚ್ಚಾಗತೊಡಗಿದೆ. ಈ ಸಂಸ್ಥೆಯ ವತಿಯಿಂದ ಹಲವು ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆಗಳು ಹಾಗೂ ಅವರ ಪ್ರಭಾವ ಹೆಚ್ಚಿಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ನಗರ ಪ್ರದೇಶಗಳಲ್ಲಿ ಗೆರಿಲ್ಲಾ ಯುದ್ಧ ಹೆಚ್ಚಿಸುವಂತೆ ಸಂಘಟನೆಗಳು ಆದೇಶ ನೀಡಿವೆಯಂತೆ. ಅಷ್ಟೆ ಅಲ್ಲ ಒಂದು ಮಾಹಿತಿಯ ಪ್ರಕಾರ ದೆಹಲಿಯಲ್ಲಿ ನಡೆದ ರೈತರ ಚಳುವಳಿಯಲ್ಲಿ ಈ ಮಾವೋವಾದಿಗಳು ನುಸುಳಿರುವುದು ನಿಜ ಅಂತ ಸಂಘಟನೆ ಒಪ್ಪಿಕೊಂಡಿದೆ.
ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ದೇಶದ ಪ್ರಮುಖ ನಗರಗಳನ್ನ ಗುರಿಯಾಗಿಟ್ಟುಕೊಂಡಿದೆ, ಅನ್ನೋ ಮಾಹಿತಿ ಕೆಲ ಮೂಲಗಳು ಬಹಿರಂಗಪಡಿಸಿದೆ. ಮಹಾರಾಷ್ಟ್ರ, ಬಿಹಾರ, ಛತ್ತೀಸ್ಗಢ, ಓರಿಸ್ಸಾ ಮತ್ತು ಜಾರ್ಖಂಡ್ ರಾಜ್ಯಗಳ ನಗರ ಪ್ರದೇಶಗಳಲ್ಲಿ ಈ ಚಟುವಟಿಕೆಗಳನ್ನು ಹೆಚ್ಚಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಸಿಪಿಐ ಈಗಾಗಲೇ ಈ ರಾಜ್ಯಗಳ ನಗರ ಪ್ರದೇಶಗಳಲ್ಲಿ ಗೆರಿಲ್ಲಾ ಯುದ್ಧ ಅಭ್ಯಾಸ ಮಾಡಬೇಕಾಗಿ ಈಗಾಗಲೇ ಆದೇಶ ನೀಡಿದೆಯಂತೆ. ವಿಶೇಷವಾಗಿ ಗೊಂಡಿಯಾ ನಗರ ಪ್ರದೇಶ ಸಂಘಟನೆಯ ಮೊದಲ ಗುರಿಯಾಗಿದೆ. ಇದರ ಜೊತೆಗೆನೇ ಬಿಹಾರ, ಛತ್ತೀಸ್ಗಢ , ಓರಿಸ್ಸಾ ಮತ್ತು ಜಾರ್ಖಂಡ್ನ ಅನೇಕ ನಗರ ಪ್ರದೇಶಗಳು ಸಹ ಈ ನಿಷೇಧಿತ ಸಂಘಟನೆಯಿಂದ ಗುರಿಯಾಗಲಿವೆ ಅನ್ನೊ ಮಾಹಿತಿ ಇದೆ.
ಈಗಾಗಲೇ ಈ ಮಾವೋವಾದಿ ಸಂಘಟನೆ ಸರ್ಕಾರದ ವಿರುದ್ಧ ಬಂಡಾಯ ಚಟುವಟಿಕೆಗಳನ್ನು ಹೆಚ್ಚಿಸಲು ವಿಶೇಷ ಆದೇಶವನ್ನು ನೀಡಿದ್ದಾಗಿದೆ. ದೇಶಾದ್ಯಂತ ಜೈಲಿನಲ್ಲಿರುವ ಸಂಘಟನೆಯ ಸದಸ್ಯರನ್ನು ಮುಕ್ತಗೊಳಿಸಲು ದೊಡ್ಡ ಮಟ್ಟದ ಗೆರಿಲ್ಲಾ ಯುದ್ಧಕ್ಕೆ ಆದೇಶ ನೀಡಲಾಗಿದೆ.
ದೆಹಲಿಯ ಕಿಸಾನ್ ಆಂದೋಲನಕ್ಕೂ ರಹಸ್ಯವಾಗಿ ನುಸುಳಿರುವುದಾಗಿ ಈ ಸಂಘಟನೆ ತನ್ನ ಆದೇಶದಲ್ಲಿ ತಪ್ಪೊಪ್ಪಿಕೊಂಡಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಕೃಷಿ ಕಾನೂನು ಹಿಂಪಡೆಯಲಾಯಿತು ಅಂತ ಕೂಡಾ ಹೇಳಲಾಗುತ್ತಿದೆ. ಈಗಾಗಲೇ ಆಗಸ್ಟ್ 19ರ ಸೋಮವಾರದಂದು ಹೊರಡಿಸಲಿರುವ ಆದೇಶದಲ್ಲಿ ಸೆಪ್ಟೆಂಬರ್ 21ರಿಂದ 27ರವೆಗೆ ಸಂಸ್ಥೆಯ ವಾರ್ಷಿಕೋತ್ಸವ ಆಚರಿಸುವಂತೆ ಕೋರಲಾಗಿದೆ.
ಸದ್ಯಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರದ ಆದೇಶದ ವಿರುದ್ಧ ಮಾವೋಮಾದಿ ಚಟುವಟಿಕೆಗಳನ್ನ ಹೆಚ್ಚಿಸಲು ಯೋಜನೆ ಮಾಡಲಾಗಿದೆ.
ಸೆಪ್ಟೆಂಬರ್ 21ರಿಂದ 27ರವರೆಗೆ ಸಂಸ್ಥೆಯು ವಾರ್ಷಿಕೋತ್ಸವನ್ನು ಆಚರಿಸಲು ಈ ಸಂಘಟನೆ ಈಗಾಗಲೇ ಆದೇಶಿಸಿದ್ದಾಗಿದೆ. ಜೈಲಿನಲ್ಲಿರುವ ಮಾವೋಮಾದಿಗಳನ್ನು ಮುಕ್ತಗೊಳಿಸಲು ದೊಡ್ಡ ಮಟ್ಟದಲ್ಲಿ ಗೆರಿಲ್ಲಾ ಯುದ್ಧ ನಡೆಸಲು ಸಿದ್ಧತೆಯಾಗಿದೆಯಂತೆ.