alex Certify ವ್ಯಕ್ತಿಯೊಬ್ಬನ ಖಾತೆಗೆ ತಪ್ಪಾಗಿ 2 ಕೋಟಿ ರೂ. ಪಾವತಿಸಿದ ಗೂಗಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಯೊಬ್ಬನ ಖಾತೆಗೆ ತಪ್ಪಾಗಿ 2 ಕೋಟಿ ರೂ. ಪಾವತಿಸಿದ ಗೂಗಲ್…!

ಒಂದು ದಿನ ಬೆಳಿಗ್ಗೆ ನಿದ್ದೆಯಿಂದ ಕಣ್ಣುಜ್ಜಿಕೊಂಡು ಎದ್ದ ಕೂಡಲೇ ನಿಮ್ಮ ಮೊಬೈಲ್​ನಲ್ಲಿ 2 ಕೋಟಿ ರೂ. ಜಮಾ ಆಗಿರುವ ಎಸ್‌ಎಂಎಸ್ ಸಂದೇಶ ನೋಡಿದರೆ ಹೇಗಿರಬೇಡ ನಿಮ್ಮ ಸ್ಥಿತಿ !

ಒಬ್ಬ ವ್ಯಕ್ತಿಗೆ ಹೀಗೆಯೇ ಆಗಿದೆ. ಸೆೈಬರ್​ ಸೆಕ್ಯುರಿಟಿ ವೃತ್ತಿಪರರಾಗಿರುವ ಸ್ಯಾಮ್​ ಕರಿ ತಮ್ಮ ಅನುಭವವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, ಗೂಗಲ್​ನಿಂದ ಸುಮಾರು 2,50,000 ಡಾಲರ್​ ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಗೂಗಲ್​ ಈ ಹಣ ಕಳುಹಿಸಿ 3 ವಾರಗಳು ಕಳೆದಿವೆ, ನಾನು ಇನ್ನೂ ಏಕೆ ಬಂತೆಂದು ಕೇಳಿಲ್ಲ. ನಾವು ಗೂಗಲ್​ ಅನ್ನು ಸಂಪರ್ಕಿಸಲು ಯಾವುದಾದರೂ ಮಾರ್ಗವಿದೆಯೇ? ಎಂದು ಜಾಲತಾಣದಲ್ಲಿ ಪ್ರಶ್ನಿಸಿದ್ದರು.

ಕರಿ ಕೆಲವೊಮ್ಮೆ ಗೂಗಲ್​ನಂತಹ ಕಂಪನಿಗಳಿಗೆ ಬಗ್​ ಬೌಂಟಿ ಹಂಟಿಂಗ್​ ನಡೆಸುತ್ತಾರೆ ಎಂದು ಹೇಳಿಕೊಂಡಿದ್ದಾರೆ, ಇದು ತಂತ್ರಜ್ಞಾನ ಸಂಸ್ಥೆಗಳಿಗೆ ಸಹಾಯ ಮಾಡಲು ಪಾವತಿಸುವ ವ್ಯವಸ್ಥೆಯಾಗಿದೆ.

ಸ್ಟಾರ್ ವೇರ್ ‌ನಲ್ಲಿನ ದೋಷಗಳನ್ನು ಕಂಡುಹಿಡಿದು ಕೊಟ್ಟಾಗ ಇಂತಹ ಕೊಡುಗೆ ಸಿಗುತ್ತದೆ. ಆದರೆ ಗೂಗಲ್​ ಆ ಹಣವನ್ನು ತಪ್ಪಾಗಿ ಕಳುಹಿಸಿದೆ ಎಂಬ ಅವರ ಅನುಮಾನ ಸರಿಯಾಯಿತು.

ಗೂಗಲ್​ ವಕ್ತಾರರು ಹೇಳಿಕೆ ನೀಡಿ, “ನಮ್ಮ ತಂಡವು ಇತ್ತೀಚೆಗೆ ಮಾನ್ಯುಯಲ್​ ದೋಷದ ಪರಿಣಾಮವಾಗಿ ತಪ್ಪು ವ್ಯಕ್ತಿಗೆ ಪಾವತಿ ಮಾಡಿದೆ. ಅದನ್ನು ಸರಿಪಡಿಸಲು ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...