ಬೆಂಗಳೂರು: ಟಿಕೆಟ್ ಬಗ್ಗೆ ಯಾರೋ ಒಬ್ಬರು ತೀರ್ಮಾನ ಮಾಡುವುದಲ್ಲ. ಎಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಲಸ ಮಾಡದಿದ್ದರೆ ಟಿಕೆಟ್ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಆಕ್ರೋಶ ಹೊರಹಾಕಿದ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪಕ್ಷದಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನಿಸುವುದಿಲ್ಲ. ಎಲ್ಲರ ಅಭಿಪ್ರಾಯ ಪಡೆದುಕೊಂಡು ವರಿಷ್ಠರು ಟಿಕೆಟ್ ಘೋಷಣೆ ಮಾಡುತ್ತಾರೆ. ಯಾರೋ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಎಂದರೆ ಸಾಧ್ಯವಿಲ್ಲ. ನಮಗೆ ಟಿಕೆಟ್ ಅಂತಿಮ ಮಾಡುವುದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲ್ಲ ಎಂದು ಹೇಳಿದ್ದಾರೆ.
ಸಣ್ಣಪುಟ್ಟ ಗೊಂದಲ ದೊಡ್ಡದು ಮಾಡದು ಹೋಗಬಾರದು. ಎಲ್ಲರೂ ಸಭೆ ಮಾಡಿ ಪ್ರಚಾರದ ಬಗ್ಗೆ ನಿರ್ಧರಿಸಬೇಕು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಚಾರ ನಡೆಯಬೇಕು. ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಸೇರಿದಂತೆ ಎಲ್ಲಾ ನಾಯಕರು ಪ್ರಚಾರ ಮಾಡಬೇಕು. ಸಾಮೂಹಿಕ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಹೋಗಬೇಕು. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇನ್ನು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆರ್.ವಿ. ದೇಶಪಾಂಡೆ ಬೇಸರ ಹೊರ ಹಾಕಿದ್ದಾರೆ. ನಮಗೆ ಟಿಕೆಟ್ ಅಂತಿಮ ಮಾಡುವುದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲು ಬರುವುದಿಲ್ಲವೆಂದರೆ ಅದು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯ ಪಡೆದು ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.