alex Certify ಬೀದಿ ನಾಯಿಗಳಿಂದ ರಕ್ಷಣೆ ಪಡೆಯಲು ಏರ್​ ಗನ್​ ಬಳಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ನಾಯಿಗಳಿಂದ ರಕ್ಷಣೆ ಪಡೆಯಲು ಏರ್​ ಗನ್​ ಬಳಕೆ…!

ಕಾಸರಗೋಡಿನ ಸಮೀಪದ ಮದರಸಾವೊಂದಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಬೀದಿ ನಾಯಿಗಳಿಂದ ರಕ್ಷಿಸಲು ಏರ್​ ಗನ್​ ಹಿಡಿದಿದ್ದು, ಅವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

ಗನ್​ ಹಿಡಿದ ಸಮೀರ್​ ಎಂಬಾತ ಮಕ್ಕಳ ಗುಂಪನ್ನು ಮದರಸಾಕ್ಕೆ ಕರೆದೊಯ್ಯುತ್ತಿರುವ ಕಿರು ವಿಡಿಯೋ ವೆೈರಲ್​ ಆದ ಒಂದು ದಿನದ ತರುವಾಯ ಪೊಲೀಸರು ತಾನಾಗಿಯೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಆತ ಮಕ್ಕಳ ಮುಂದೆ ಬಂದೂಕು ಹಿಡಿದು ನಡೆಯುತ್ತಿದ್ದು, ಬೀದಿ ನಾಯಿ ದಾಳಿ ಮಾಡಿದರೆ ಶೂಟ್​ ಮಾಡುವುದಾಗಿ ಹೇಳುತ್ತಿದ್ದ. ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್​ 153 ರಡಿ ಪ್ರಕರಣ ಮಾಡಲಾಗಿದೆ. ಮಕ್ಕಳ ರಕ್ಷಣೆ ತಂದೆಯಾಗಿ ತನ್ನ ಜವಾಬ್ದಾರಿ ಎಂದು ಸಮೀರ್​ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ನೆರೆಹೊರೆಯವರು ಬೀದಿ ನಾಯಿಗಳ ಭಯದಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು, ಇದು ಈ ಪ್ರದೇಶದಲ್ಲಿ ಕೆಲವು ಸಮಯದಿಂದ ಸಮಸ್ಯೆಯಾಗಿದೆ ಎಂದು ಆತ ಹೇಳಿದ್ದಾನೆ.

ನಾಯಿಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಅಥವಾ ಆಂಟಿ ರೇಬಿಸ್​ ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಸರ್ಕಾರ ವಿಫಲವಾಗಿದೆ ಎಂಬ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ಸರ್ಕಾರವು ಕೆಲ ಕ್ರಮಗಳನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್​ 20 ರಿಂದ ಅಕ್ಟೋಬರ್​ 20ರವರೆಗೆ ರಾಜ್ಯಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...