ನವದೆಹಲಿ: ಪ್ರಧಾನಿ ಮೋದಿ ಜನ್ಮದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನ ರಕ್ತದಾನ ಮಾಡಿದ್ದು, ಹೊಸ ವಿಶ್ವ ದಾಖಲೆ ನಿರ್ಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ರಕ್ತದಾನ ಅಮೃತ ಮಹೋತ್ಸವ ಹೆಸರಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, 6000ಕ್ಕೂ ಅಧಿಕ ಶಿಬಿರ ಆಯೋಜನೆಗೆ ಅನುಮತಿ ನೀಡಲಾಗಿತ್ತು. 1.50 ಲಕ್ಷ ಜನರು ರಕ್ತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು, ಮೊದಲ ದಿನವೇ ಒಂದು ಲಕ್ಷಕ್ಕೂ ಅಧಿಕ ಜನ ರಕ್ತದಾನ ಮಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ.
ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯಾ ಸೇರಿದಂತೆ ಹಲವು ನಾಯಕರು ರಕ್ತದಾನ ಮಾಡಿದ್ದಾರೆ. ಈ ಹಿಂದೆ 2014 ರ ಸೆ. 6 ರಂದು 87,059 ಜನ 300 ನಗರಗಳ 550 ಶಿಬಿರಗಳ ಮೂಲಕ ರಕ್ತದಾನ ಮಾಡಿದ್ದು ವಿಶ್ವ ದಾಖಲೆಯಾಗಿತ್ತು. ಮೋದಿ ಜನ್ಮದಿನದ ಪ್ರಯುಕ್ತ ಅ. 2 ರವರೆಗೂ ದೇಶಾದ್ಯಂತ ರಕ್ತದಾನ ಶಿಬಿರ ನಡೆಯಲಿದೆ.