ವಯಸ್ಸು 60 ಆದ ತಕ್ಷಣ ಕೆಲವರು ವಿಶ್ರಾಂತಿ ಬಯಸುತ್ತಾರೆ. ಆದರೆ ಬಹಳಷ್ಟು ಮಂದಿ ಇದನ್ನೇ ಸವಾಲಾಗಿ ಸ್ವೀಕರಿಸಿ ಯುವ ಜನತೆಯನ್ನೂ ನಾಚುವಂತೆ ಮಾಡುತ್ತಾರೆ. ವಯಸ್ಸಾದ ತಕ್ಷಣ ಆರೋಗ್ಯದ ಕುರಿತ ಅವರ ಕಾಳಜಿಯೇ ಇದಕ್ಕೆ ಕಾರಣ.
ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಶ್ರಮಿಕ ವರ್ಗ ಸಾಯುವವರೆಗೂ ದುಡಿಯುವ ಅನಿವಾರ್ಯತೆ ಇರುತ್ತದೆ. ಇದಕ್ಕೆ ವಿಶ್ರಾಂತಿ ಎಂಬುದೇ ಇರುವುದಿಲ್ಲ.
ಅಂಥವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ವೃದ್ಧೆಯೊಬ್ಬರು ಸಲೀಸಾಗಿ ಸೈಕಲ್ ತುಳಿಯುತ್ತಿದ್ದಾರೆ, ಅಷ್ಟೇ ವಯಸ್ಸಾದ ಮತ್ತೊಬ್ಬರು ಹಿಂದಿನ ಸೀಟಿನಲ್ಲಿ ಕುಳಿತು ನಸು ನಗು ಬೀರುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ವೃದ್ಧ ಮಹಿಳೆಯರ ಜೀವನೋತ್ಸವ ಕುರಿತು ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.