ಲೆಬನಾನ್ನಲ್ಲಿ ಆಥಿರ್ಕ ಪರಿಸ್ಥಿತಿ ಗಂಭೀರವಾಗಿದೆ. ಕಳೆದ ಮೂರು ವರ್ಷಗಳಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಹೀಗಾಗಿ ಹಲವು ಬ್ಯಾಂಕ್ಗಳು ಉಳಿತಾಯ ಖಾತೆಗಳ ಬಳಕೆಗೆ ನಿರ್ಬಂಧ ಹೇರಿವೆ. ಈ ತೀರ್ಮಾನದಿಂದ ಇತ್ತೀಚೆಗೆ ಆ ದೇಶಾದ್ಯಂತ ಬ್ಯಾಂಕ್ ದರೋಡೆ ಪ್ರಕರಣಗಳ ಉಲ್ಬಣಕ್ಕೆ ಸಹ ಕಾರಣವಾಗಿದೆ.
ಇತ್ತೀಚೆಗೆ ಮಹಿಳೆಯೊಬ್ಬರು ಬೈರುತ್ನಲ್ಲಿ ಆಟಿಕೆ ಗನ್ ಹಿಡಿದುಕೊಂಡು ಬ್ಯಾಂಕ್ ಶಾಖೆಗೆ ನುಗ್ಗಿ ತನ್ನ ಸ್ವಂತ ಹಣವನ್ನು ದರೋಡೆ ಮಾಡಿದ್ದಳು.
ಬುಧವಾರ ಬೆಳಿಗ್ಗೆ 11 ಗಂಟೆಗೆ, ಮಹಿಳೆ ಸೊಡೆಕೊ ಪ್ರದೇಶದ ಬ್ಯಾಂಕ್ಗೆ ಪ್ರವೇಶಿಸಿ, ತನ್ನ ಉಳಿತಾಯ ಖಾತೆಯಿಂದ ಹಣವನ್ನು ಕೊಡುವಂತೆ ಒತ್ತಾಯಿಸಿದ್ದು, ಆಕೆಯ ಖಾತೆಯಲ್ಲಿದ್ದ 13,000 ಡಾಲರ್ಗಿಂತ ಹೆಚ್ಚಿನ ಹಣವನ್ನು ಪಡೆಯಲು ಬ್ಯಾಂಕ್ ಸಿಬ್ಬಂದಿ ಅವಕಾಶ ಮಾಡಿಕೊಟ್ಟರು.
2019 ರಿಂದ ವಿನಿಮಯ ದರದಲ್ಲಿ 90 ಪ್ರತಿಶತದಷ್ಟು ಕುಸಿತದ ನಂತರ ಕೇವಲ 160 ಡಾಲರ್ ಮೌಲ್ಯದ ಸುಮಾರು 6 ಮಿಲಿಯನ್ ಲೆಬನಾನಿನ ಪೌಂಡ್ಗಳಷ್ಟೇ ಆಕೆಗೆ ದಕ್ಕಿದೆ.
ಈ ನಡುವೆ ತನ್ನ ಮಗಳು ತನ್ನ ಕಿರಿಯ ಸಹೋದರಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ತನ್ನ ಸ್ವಂತ ಖಾತೆಯಿಂದ ಹಣವನ್ನು ತೆಗೆದುಕೊಂಡಿದ್ದಾಳೆ ಎಂದು ಆಕೆಯ ತಾಯಿ ಲೆಬನಾನಿನ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದು ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆ ಮಾತ್ರವಲ್ಲ. ಆಗಸ್ಟ್ ಮಧ್ಯದಲ್ಲಿ ಒಬ್ಬ ವ್ಯಕ್ತಿ ತನ್ನ ತಂದೆಗೆ ಚಿಕಿತ್ಸೆ ನೀಡಲು ಹಣವನ್ನು ಹಿಂಪಡೆಯಲು ಬ್ಯಾಂಕ್ಗೆ ನುಗ್ಗಿ, ಬಂಧನಕ್ಕೊಳಗಾಗಿದ್ದ.