ವಾಸ್ತು ಶಾಸ್ತ್ರದ ಪ್ರಕಾರ ಮನೆ ಒಳಗಿನ ಪ್ರದೇಶ ಮಾತ್ರವಲ್ಲ ಮನೆ ಹೊರಗಿನ ಪ್ರದೇಶ ಕೂಡ ಮುಖ್ಯ. ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ವಾಸ್ತು ಪ್ರಕಾರ, ಪ್ರತಿಯೊಂದು ದಿಕ್ಕನ್ನೂ ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಮನೆಯ ಹೊರಗೆ ಕೆಲ ವಸ್ತುಗಳನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ಕಸವನ್ನು ಎಂದೂ ಮನೆಯ ಹೊರಗೆ ಇಡಬಾರದು. ಮನೆ ಮುಂದೆ ಕಸವನ್ನು ಇಟ್ಟರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಇದ್ರಿಂದ ಮನೆಗಳಲ್ಲಿ ನೋವು, ರೋಗ ಮತ್ತು ಆರ್ಥಿಕ ನಷ್ಟ ಎದುರಾಗುತ್ತದೆ.
ಮನೆಯ ಮುಖ್ಯ ಬಾಗಿಲು ಮುಂಭಾಗದ ರಸ್ತೆಗಿಂತ ಎತ್ತರವಾಗಿರಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ರಸ್ತೆ ಬಾಗಿಲಿಗಿಂತ ಎತ್ತದರಲ್ಲಿದ್ದರೆ ಒಳ್ಳೆಯದಲ್ಲ. ಇದ್ರಿಂದ ನಕಾರಾತ್ಮಕ ಶಕ್ತಿ ನೆಲೆಗೊಳ್ಳುತ್ತದೆ.
ಮನೆಯ ಮುಖ್ಯ ದ್ವಾರದ ಬಳಿ ಮುಳ್ಳಿನ ಗಿಡ ಕೂಡ ಇರಬಾರದು. ಇದು ಮನೆಯ ಸುಖ, ಸಮೃದ್ಧಿ ನಾಶಕ್ಕೆ ಕಾರಣವಾಗುತ್ತದೆ.
ಅನೇಕರು ಮನೆಯ ಮುಂದೆ ಕಲ್ಲು ಹಾಗೂ ಇಟ್ಟಿಗೆಯನ್ನು ಸಂಗ್ರಹಿಸುತ್ತಾರೆ. ವಾಸ್ತು ಪ್ರಕಾರ ಇದು ಒಳ್ಳೆಯದಲ್ಲ. ಇದ್ರಿಂದ ಸಮಸ್ಯೆ ಎದುರಾಗುತ್ತದೆ. ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮನೆ ಮುಂದೆ ಎಂದೂ ಕೊಳಕು ನೀರನ್ನು ಸಂಗ್ರಹಿಸಬಾರದು. ಮನೆ ಹಾಗೂ ಮನೆ ಹೊರ ಭಾಗ ಸ್ವಚ್ಛವಾಗಿಲ್ಲವೆಂದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ. ಆ ಮನೆಯನ್ನು ಲಕ್ಷ್ಮಿ ಎಂದಿಗೂ ಪ್ರವೇಶ ಮಾಡುವುದಿಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.