ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ.
ಜೋಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಜೋಳದ ಜೊತೆ ಉಪ್ಪು, ಲಿಂಬೆ ರಸ ಬೆರೆತರೆ ರುಚಿ ಹೆಚ್ಚಾಗುವ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ. ಆದ್ರೆ ನಿಯಮ ಮೀರಿದ್ರೆ ಆರೋಗ್ಯ ಹದಗೆಡುತ್ತದೆ.
ಜೋಳ ತಿಂದ ತಕ್ಷಣ ನೀರು ಕುಡಿಯಬಾರದು. ನೀರು ಹಾಗೂ ಜೋಳದ ಮಧ್ಯೆ ಸಮಯದ ಅಂತರವಿರಬೇಕು. ಜೋಳವನ್ನು ತಿಂದ ತಕ್ಷಣ ನೀರು ಕುಡಿದ್ರೆ ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.
ಜೋಳದಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ನೀವು ಜೋಳ ತಿಂದ ತಕ್ಷಣ ನೀರು ಕುಡಿದ್ರೆ ಫೈಬರ್ ಜೀರ್ಣವಾಗುವುದಿಲ್ಲ. ಅದು ಜೀರ್ಣವಾಗಲು ತುಂಬಾ ಸಮಯ ಹಿಡಿಯುತ್ತದೆ. ಇದ್ರಿಂದ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಜೋಳ ತಿಂದ ತಕ್ಷಣ ನೀರು ಕುಡಿದ್ರೆ ಗ್ಯಾಸ್ ಸಮಸ್ಯೆ ಕಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಗ್ಯಾಸ್ ವಾಂತಿ, ತಲೆ ನೋವಿಗೂ ಕಾರಣವಾಗಬಹುದು. ಹಾಗಾಗಿ ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ. ಜೋಳ ತಿನ್ನುವ ಅರ್ಧ ಗಂಟೆ ಮೊದಲು ಹಾಗೂ ಜೋಳ ತಿಂದ ಮೇಲೆ 45 ನಿಮಿಷದ ನಂತ್ರ ನೀರು ಕುಡಿಯಿರಿ.