ಹಳ್ಳಿಯಿಂದ ದಿಲ್ಲಿಯವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಕೈನಲ್ಲೂ ಮೊಬೈಲ್. ಇದು ಸ್ಮಾರ್ಟ್ಫೋನ್ ಯುಗ. ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಬ್ಯುಸಿ. ಸಾಮಾಜಿಕ ಮಾಧ್ಯಮ ಕುಟುಂಬವನ್ನು ಹಾಳು ಮಾಡ್ತಾ ಇದೆ. ಮನೆಗೆ ಮಾರಿ, ಊರಿಗೆ ಉಪಕಾರಿ ಎನ್ನುವಂತಾಗಿದೆ.
ಹಿಂದೆ ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಗಲಾಟೆ, ನಗು, ಮಾತು ಕೇಳಿಬರ್ತಾ ಇತ್ತು. ಈಗ 10 ಮಂದಿ ಇದ್ದರೂ ನಗು, ಮಾತು ಕೇಳೋದಿಲ್ಲ. ಮನೆಯವರ ಕೈನಲ್ಲಿ ಮೊಬೈಲ್. ಅಕ್ಕಪಕ್ಕದಲ್ಲಿದ್ದರೂ ಮಾತಿಲ್ಲ, ಕಥೆಯಿಲ್ಲ. ಈ ಇಂಟರ್ನೆಟ್ ಸಂಬಂಧವನ್ನು ಸಂಪೂರ್ಣ ಹಾಳುಮಾಡ್ತಾ ಇದೆ. ದಿನದಿನಕ್ಕೂ ಸಂಬಂಧ ಹದಗೆಡಲು ಸ್ಮಾರ್ಟ್ಫೋನ್ ಕಾರಣವಾಗ್ತಾ ಇದೆ.
ಅಧ್ಯಯನವೊಂದು ಇದಕ್ಕೆ ಪುಷ್ಠಿ ನೀಡಿದೆ. ಸ್ಮಾರ್ಟ್ಫೋನ್ ನಿಂದಾಗಿ ಸಂಬಂಧ ಹಾಳಾಗ್ತಿದೆ. ಅದ್ರಲ್ಲೂ ಪತಿ-ಪತ್ನಿ ಸಂಬಂಧದ ಮೇಲೆ ಇದು ಕೆಟ್ಟ ಪರಿಣಾಮ ಬೀರ್ತಾ ಇದೆ ಎಂದು ಅಧ್ಯಯನ ಹೇಳಿದೆ. ಮೊದಲಿದ್ದ ವಾತಾವರಣ ಈಗಿಲ್ಲ ಎಂದಾದಲ್ಲಿ ಈಗಲೇ ಎಚ್ಚೆತ್ತುಕೊಳ್ಳಿ. ಸ್ಮಾರ್ಟ್ಫೋನ್ ಬದಿಗಿಟ್ಟು ಸಂಬಂಧಕ್ಕೆ ಬೆಲೆ ಕೊಡೋದನ್ನು ಕಲಿಯಿರಿ.