ಜಗತ್ತಿನಲ್ಲಿ ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಮಕ್ಕಳಾದ್ರೂ ಸರಿ, ವೃದ್ಧರಾದ್ರೂ ಸರಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಯಸ್ಸು ಯಾವತ್ತೂ ಅಡ್ಡಿಯಲ್ಲ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಖಂಡಿತಾ ನೀವು ಅಚ್ಚರಿ ಪಡ್ತೀರಾ.
70 ವರ್ಷದ ವ್ಯಕ್ತಿಯೊಬ್ಬರು ರಸ್ತೆಯಿಂದ ಮೈದಾನದಲ್ಲಿರು ಬಾಸ್ಕೆಟ್ಗೆ ಬಾಲ್ ಹಾರಿಸುತ್ತಿರುವ ವಿಡಿಯೋ ಆನ್ಲೈನ್ನಲ್ಲಿ ಕ್ರೇಜಿ ವೈರಲ್ ಆಗಿದೆ. ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಕ್ರೀಡಾಪಟು ಲುಕ್ ಎ ಮೆನಾರ್ಡ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಬರೋಬ್ಬರಿ 19 ಮಿಲಿಯನ್ ವೀಕ್ಷಣೆ ಗಳಿಸಿದೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ಲಕ್ ಎ ಮೆನಾರ್ಡ್ ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಬ್ಯೂಟಿಫುಲ್ ಸೋಲ್ಸ್ ಇನ್ ಎನ್ವೈಸಿಯಲ್ಲಿ ಹಂಚಿಕೊಂಡಿದ್ದಾರೆ. ಜಾರ್ಜ್ ಪಪೌಟ್ಸಿಸ್ ಎಂಬ 70 ವರ್ಷದ ವ್ಯಕ್ತಿ ರಸ್ತೆಯಲ್ಲಿ ಬಿದ್ದಿರುವ ಚೆಂಡನ್ನು ತನಗೆ ರವಾನಿಸುವಂತೆ ದಾರಿಹೋಕರೊಬ್ಬರಲ್ಲಿ ಕೇಳುತ್ತಾರೆ. ಶೀಘ್ರದಲ್ಲೇ ವೃದ್ಧ ವ್ಯಕ್ತಿ ಹೇಳಿದಂತೆ ನಡೆದ ದಾರಿಹೋಕ ಚೆಂಡನ್ನು ತನ್ನ ಕಾಲಿನ ಮುಖಾಂತರ ರವಾನಿಸಿದ್ದಾರೆ. ತಕ್ಷಣವೇ, ಜಾರ್ಜ್ ಮೇಲಕ್ಕೆ ಹಾರಿ ರಸ್ತೆಯಲ್ಲಿ ನಿಂತು ಕಾಂಪೌಂಡ್ ಒಳಗೆ ದೂರದಲ್ಲಿದ್ದ ಬಾಸ್ಕೆಟ್ ಗೆ ಚೆಂಡನ್ನು ಅದರೊಳಗೆ ಬೀಳಿಸಿದ್ದಾರೆ.
ಅಂದಹಾಗೆ, ಜಾರ್ಜ್ ನ್ಯೂಯಾರ್ಕ್ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಈ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, 19 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ.