alex Certify ಮನೆಯೊಳಗೆ ಬಂದ ದೈತ್ಯ ಕೋತಿ ನೋಡಿ ಶಾಕ್; ಹೃದಯಾಘಾತದಿಂದ‌ ವ್ಯಕ್ತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯೊಳಗೆ ಬಂದ ದೈತ್ಯ ಕೋತಿ ನೋಡಿ ಶಾಕ್; ಹೃದಯಾಘಾತದಿಂದ‌ ವ್ಯಕ್ತಿ ಸಾವು

ಕೋತಿಗಳು ತರಲೆ ಮಾಡೋದ್ರಲ್ಲಿ ಎತ್ತಿದ ಕೈ. ಆದರೆ ಈಗ ಇದೇ ಕೋತಿಯಿಂದ ವ್ಯಕ್ತಿಯೊಬ್ಬರ ಸಾವಾಗಿದೆ ಅಂದ್ರೆ ನಂಬ್ತಿರಾ? ನಂಬಲೇ ಬೇಕು ಇಂತಹದ್ದೊಂದು ಘಟನೆ ತೆಲಂಗಾಣದ ಹನುಮಂತ ನಗರದಲ್ಲಿ ನಡೆದಿದೆ.

ಒಮ್ಮಿಂದೊಮ್ಮೆಲೆ ಮನೆಯೊಳಗೆ ನುಗ್ಗಿದ ದೈತ್ಯ ರೂಪದ ಕೋತಿಯನ್ನ ನೋಡಿ ರಾಜು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಪ್ರತಿದಿನದಂತೆ ರಾಜು ಅವರ ಪತ್ನಿ ಮನೆಯ ಹೊರಗಿನ ಬಾಗಿಲು ತೆರೆದಿಟ್ಟು ನೀರು ತುಂಬಲು ಹೋಗಿದ್ದಾರೆ. ಮನೆ ಬಾಗಿಲು ತೆರೆದಿದ್ದನ್ನ ನೋಡಿದ ಕೋತಿ ಮನೆಯೊಳಗೆ ನುಗ್ಗಿದೆ. ನೀರು ತುಂಬಿಕೊಂಡು ಬಂದ ರಾಜು ಅವರ ಪತ್ನಿ ಅದನ್ನ ನೋಡಿ ಗಾಬರಿಯಿಂದ ಕೂಗಿದ್ದಾರೆ. ಅಲ್ಲೇ ಮಲಗಿದ್ದ ರಾಜು ಎದ್ದು ನೋಡಿದಾಗ ಕೋತಿ ಅವರ ಎದುರೇ ಕೂತಿತ್ತು. ಅದನ್ನು ನೋಡಿ ಬೆಚ್ಚಿಬಿದ್ದಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಕ್ಷಣವೇ ಅಕ್ಕಪಕ್ಕದವರು ಮನೆಗೆ ಬಂದು ರಾಜು ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರೊಳಗಾಗಲೇ ಅವರು ಕೊನೆಯುಸಿರೆಳೆದಾಗಿತ್ತು. ಈ ಘಟನೆ ರಾಜು ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಆಘಾತ ನೀಡಿದೆ.

ಈ ಪ್ರದೇಶದಲ್ಲಿ ಸಾಕಷ್ಟು ದಿನಗಳಿಂದ ಮಂಗಗಳ ಕಾಟ ಹೆಚ್ಚಾಗಿದ್ದು, ಅವು ಮನೆಗಳಿಗೆ ನುಗ್ಗುವುದು, ಜನರ ಮೇಲೆ ದಾಳಿ ಮಾಡುವುದು, ವಸ್ತುಗಳನ್ನ ಎತ್ತಿಕೊಂಡು ಹೋಗುವುದು, ಹಾಗೂ ಜನರಿಗೆ ಗಾಯಗೊಳಿಸುವುದು ಸಾಮಾನ್ಯವಾಗಿದೆ.

ಇದರ ಕುರಿತು ಸ್ಥಳೀಯರು ಪೌರಾಯುಕ್ತರಿಗೆ ದೂರನ್ನ ಕೊಟ್ಟಿದ್ದಾರೆ. ಈಗಾಗಲೇ ಮಂಗಗಳನ್ನ ಹಿಡಿಯುವವರನ್ನ ನೇಮಿಸಲೆಂದೇ ಹತ್ತು ಲಕ್ಷ ಮಂಜೂರು ಮಾಡಲಾಗಿದೆ. ಈಗಾಗಲೇ ಸುಮಾರು 1000 ಕೋತಿಗಳನ್ನ ಕಾಡಿಗೆ ಬಿಡಲಾಗಿದೆ. ಆದರೂ ಕರೀಂ ನಗರದಲ್ಲಿ ಹಾವಳಿ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...