‘ಪುಸ್ತಕದ ವಾಸನೆ ಅಲರ್ಜಿ‘; ಹೋಮ್ ವರ್ಕ್ ತಪ್ಪಿಸಿಕೊಳ್ಳಲು ಬಾಲಕ ಮಾಡಿದ್ದ ಹೈಡ್ರಾಮಾ 15-09-2022 8:26AM IST / No Comments / Posted In: Featured News, Live News, International ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗುವುದಕ್ಕೆ ಹಠ ಮಾಡುತ್ತಾರೆ. ಹಾಗಂತ ಶಾಲೆ ತಪ್ಪಿಸೋದಕ್ಕಾಗುತ್ತಾ? ಇನ್ನು ಶಾಲೆಗೆ ಹೋದ ಮೇಲೆ ಅಲ್ಲಿ ಕೊಡುವ ಹೋಮ್ ವರ್ಕ್ ಕೂಡಾ ಮಾಡಲೇ ಬೇಕು. ಆದರೆ ಕೆಲ ಕಿಲಾಡಿ ಮಕ್ಕಳಿರ್ತಾರೆ , ಅವರು ಹೊಟ್ಟೆ ನೋವು, ಕೈ ನೋವು ಅಂತ ಹೇಳಿ, ಹೋಮ್ವರ್ಕ್ ಮಾಡೋದು ತಪ್ಪಿದ್ರೆ ಸಾಕು ಅಂತ ಅನ್ಕೊಳ್ತಾರೆ. ಆದರೆ ಚೀನಾದಲ್ಲಿ ಇರೋ ಪ್ರಚಂಡ ಪುಟಾಣಿ ಹೋಮ್ವರ್ಕ್ ಮಾಡೋದು ತಪ್ಪಿಸಿಕೊಳ್ಳೊಕೆ ಹೇಳಿದ್ದ ನೆಪ ಕೇಳಿದ್ರೆ ಎಂಥವರು ಕೂಡಾ ದಂಗಾಗಿ ಬಿಡ್ತಾರೆ. ಅಷ್ಟಕ್ಕೂ ಆತ ಹೇಳಿದ್ದ ನೆಪ ಆದ್ರೂ ಏನು ಗೊತ್ತಾ? ಆತನಿಗೆ ‘ಪುಸ್ತಕದ ವಾಸನೆ‘ ಅಂದ್ರೆನೇ ಅಲರ್ಜಿ ಅಂತ ತನ್ನ ಅಮ್ಮನ ಮುಂದೆ ಹೇಳ್ಕೊಂಡಿದ್ದಾನೆ. ಚಿತ್ರ-ವಿಚಿತ್ರ ಅಲರ್ಜಿಗಳ ಬಗ್ಗೆ ನೀವೆಲ್ಲ ಕೇಳಿರ್ತಿರಾ? ಇದೇ ಮೊದಲ ಬಾರಿಗೆ ‘ಪುಸ್ತಕ ವಾಸನೆ ಅಲರ್ಜಿ‘ಬಗ್ಗೆ ಕೇಳ್ತಿರೋದು. 11ವರ್ಷ ಇರುವಾಗಲೇ, ಹೋಮ್ವರ್ಕ್ ಮಾಡುವುದನ್ನ ತಪ್ಪಿಸಿಕೊಳ್ಳುವುದಕ್ಕೆ, ಈ ಬಾಲಕ ಕೊಟ್ಟ ಕಾರಣ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸೌತ್ ಚೀನಾ ಪೋಸ್ಟ್ನಲ್ಲಿ ಶೇರ್ ಮಾಡಲಾಗಿರುವ ಈ ಫೋಟೋದಲ್ಲಿ ಬಾಲಕನ ತಾಯಿ ತನ್ನ ಮಗ, ‘ಪುಸ್ತಕ ವಾಸನೆ ಅಂದ್ರೆ ಅಲರ್ಜಿ‘ ಅಂತ ಹೇಳಿದ್ದಲ್ಲದೇ, ಕಣ್ಣೀರು ಸುರಿಸುತ್ತಾ, ಮೂಗಿನ ಮೇಲೆ ಕರವಸ್ತ್ರವನ್ನ ಇರಿಸಿಕೊಂಡು ನಾಟಕ ಆಡಿದ್ದ ಪರಿಯನ್ನ ಸಹ ವಿವರಿಸಿದ್ದಾರೆ. ಅಷ್ಟೆ ಅಲ್ಲ 11ವರ್ಷದ ಅಸಿಯಾನ್ ಅನ್ನೋ ಹೆಸರಿನ ಈ ಬಾಲಕ, ಹೇಗಾದರೂ ಸರಿ ಹೋಮ್ವರ್ಕ್ ಮಾಡೋದು ತಪ್ಪಿದರೆ ಸಾಕು ಅಂತ ವಿವಿಧ ನೆಪ ಮಾಡಿ ಡ್ರಾಮಾ ಮಾಡಿದ್ದಾನೆ. ಕಣ್ಣಿಂದ ನೀರು ಸುರಿಸಿ ಅಮ್ಮನ ಮನವೋಲಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೂ ಆತನ ತಾಯಿ ಅದಕ್ಕೆಲ್ಲ ಕರಗದೇ ಹೋಮ್ವರ್ಕ್ ಮಾಡಿಸಿದ್ದಾಳೆ. 5 ವರ್ಷ ಇಲ್ಲದ ಅಲರ್ಜಿ ಈಗ ಎಲ್ಲಿಂದ ಬಂತು ಅಂತ ಆತನ ತಾಯಿ ಬೈಯ್ದಿದ್ದಾಳೆ. 5 ವರ್ಷದಿಂದಲೂ ‘ಪುಸ್ತಕ ವಾಸನೆ ಅಲರ್ಜಿ‘ ನನ್ನೊಳಗೆನೇ ಇತ್ತು. ಈಗ ಅದು ಮಿತಿಮೀರಿ ಬಿಟ್ಟಿದೆ ಅಂತ ಚಾಣಾಕ್ಷತನದಿಂದ ಉತ್ತರ ಕೊಡುತ್ತಾನೆ. ಈಗಲೇ ಈ ಬಾಲಕ ನೆಪಗಳನ್ನ ಹೇಳುವುದರಲ್ಲಿ ಇಷ್ಟು ಎಕ್ಸ್ಪರ್ಟ್ ಆಗಿದ್ದಾನೆಂದರೆ ಮುಂದೆ ಹೇಗೆ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಬಾಲಕನ ಹೈಡ್ರಾಮಾ ಸಖತ್ ಸೌಂಡ್ ಮಾಡ್ತಿದೆ. ‘Homework allergy’: boy claims reaction takes 5 years to ‘incubate’ goes viral https://t.co/TUSIIiwgR4 — South China Morning Post (@SCMPNews) September 14, 2022