ಕೆಲವರಿಗೆ ಕಾಫಿ ಸೇವಿಸುವ ಅಭ್ಯಾಸವಿದ್ದರೆ, ಇನ್ನು ಕೆಲವರಿಗೆ ಎಣ್ಣೆ ಹೀರುವ ಅಭ್ಯಾಸವಿರುತ್ತದೆ. ಈ ರೀತಿ ಏಕೆ ಸೇವಿಸುತ್ತಾರೆ ಎಂದರೆ ಬಹುತೇಕರು ರುಚಿಯನ್ನು ಅನುಭವಿಸಲು ಎನ್ನುವ ಮಾತನ್ನು ಹೇಳುತ್ತಾರೆ. ಆದರೆ ಇದು ನಿಜವಲ್ಲವಂತೆ.
ಹೌದು, ಅಮೆರಿಕಾದ ಮರಿಲಿನ್ ಕರ್ನೆಲಿಸ್ ಹಾಗೂ ತಂಡದವರು ನಡೆಸಿರುವ ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಕಾಫಿ, ಮದ್ಯ ಹಾಗೂ ಈ ರೀತಿ ಪಾನೀಯಗಳನ್ನು ಸೇವಿಸುವುದು ಮಾನಸಿಕ ಖುಷಿಗೆ ಹೊರತು ರುಚಿಗಲ್ಲ ಎನ್ನುವುದು ಸಾಬೀತಾಗಿದೆ.
ಈ ತಂಡದ ಸದಸ್ಯರು ಅಮೆರಿಕಾ, ಇಂಗ್ಲೆಂಡ್ ಹಾಗೂ ಯೂರೋಪ್ ಭಾಗದಲ್ಲಿ 3,36,000 ಜನರ ಅಭಿಪ್ರಾಯ ಸಂಗ್ರಹಿಸಿದ್ದು, ಈ ವೇಳೆ ಇದು ಬಯಲಾಗಿದೆ. ಸಂಶೋಧನೆ ವೇಳೆ ಸಿಹಿ ಹಾಗೂ ಕಹಿ ಎನ್ನುವ ಪಾನೀಯವೆಂದು ವಿಂಗಡಿಸಲಾಗಿದೆ.
ಸಿಹಿ ಪಾನೀಯದಲ್ಲಿ ಸಕ್ಕರೆ ನೀರು, ದ್ರಾಕ್ಷಿಯೇತರ ಹಣ್ಣಿನ ಜ್ಯೂಸ್ ಗಳನ್ನು ಒದಗಿಸಿದ್ದರೆ, ಕಹಿ ಪಾನೀಯದಲ್ಲಿ ಕಾಫಿ, ಟೀ, ಆಲ್ಕೋಹಾಲ್, ದ್ರಾಕ್ಷಿ ರಸವನ್ನು ಸೇರಿಸಲಾಗಿದೆ. ಇದರಲ್ಲಿ ಬಹುತೇಕರು ಕಹಿ ಪಾನೀಯ ಸೇವಿಸುವುದು ತಮ್ಮ ಮಾನಸಿಕ ಖುಷಿಗಾಗಿ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಸಂಶೋಧಕಿ ಕರ್ನೆಲಿಕ್ಸ್ ಪ್ರಕಾರ, ಕಹಿ ಪಾನೀಯವನ್ನು ಸೇವಿಸುವ ಅನೇಕರು ತಮ್ಮ ಪಾನೀಯಕ್ಕೆ ಸಕ್ಕರೆ ಬೆರೆಸುತ್ತಾರೆ. ಆದರೆ ಈ ಬಗ್ಗೆ ಸಂಶೋಧನೆ ಗಮನ ಹರಿಸಿಲ್ಲ ಎಂದಿದ್ದಾರೆ.