ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಮಹತ್ವವಿದೆ. ಹಾಗೆಯೆ ಮನೆಗೆ ತರುವ ಪ್ರತಿಯೊಂದು ವಸ್ತು ಕೂಡ ಮನೆ ವಾತಾವರಣವನ್ನು ಬದಲಿಸುವ ಶಕ್ತಿ ಹೊಂದಿದೆ. ಜನರು ತಮಗೆ ಅನುಕೂಲವಾದಾಗ ವಸ್ತುಗಳನ್ನು ಖರೀದಿ ಮಾಡ್ತಾರೆ. ವಾಸ್ತು ಪ್ರಕಾರ ಅದು ತಪ್ಪು. ಮನೆಯ ಪೀಠೋಪಕರಣಗಳನ್ನು ಕೂಡ ಜನರು ತಮಗೆ ಬೇಕೆಂದಾಗ ಖರೀದಿಸಬಾರದು. ಪೀಠೋಪಕರಣ ಖರೀದಿ ವೇಳೆ ಕೂಡ ಜನರು ಶುಭ ದಿನ ಮತ್ತು ನಕ್ಷತ್ರವನ್ನು ನೋಡಬೇಕು.
ಮನೆಯ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಪೀಠೋಪಕರಣ ಮಾಡುತ್ತದೆ. ಆದ್ರೆ ಪೀಠೋಪಕರಣ ಮನೆ ಶಾಂತಿ ಹಾಳು ಮಾಡಬಾರದು ಎಂದಾದ್ರೆ ಜನರು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಪೀಠೋಪಕರಣಗಳನ್ನು ಖರೀದಿಸಬೇಕು. ಇವು ಪೀಠೋಪಕರಣ ಖರೀದಿಗೆ ಮಂಗಳಕರ ದಿನ. ಮಂಗಳವಾರ, ಶನಿವಾರ ಅಥವಾ ಅಮವಾಸ್ಯೆಯಂದು ಪೀಠೋಪಕರಣಗಳನ್ನು ಎಂದಿಗೂ ಖರೀದಿಸಬಾರದು. ಅದು ಅಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಒಂದ್ವೇಳೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಅಮಾವಾಸ್ಯೆಯ ದಿನವಾಗಿದ್ದರೆ ಆ ದಿನ ಕೂಡ ಪೀಠೋಪಕರಣಗಳನ್ನು ಖರೀದಿಸಬಾರದು. ಇದು ಮನೆಯಲ್ಲಿ ಶಾಂತಿ ಕದಡುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಾಗೆಯೇ ಪೀಠೋಪಕರಣ ಖರೀದಿ ವೇಳೆ ಯಾವ ಮರದಿಂದ ತಯಾರಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಅಶೋಕ, ಶ್ರೀಗಂಧ, ಬೇವಿನ ಮರಗಳಿಂದ ಮಾಡಿದ ಪೀಠೋಪಕರಣಗಳು ಮನೆಯಲ್ಲಿ ಶುಭ ಫಲಿತಾಂಶಗಳನ್ನು ತರುತ್ತವೆ.
ಹಾಗೆಯೇ ಪೀಠೋಪಕರಣ ಚೂಪಾಗಿರದಂತೆ ನೋಡಿಕೊಳ್ಳಿ. ಚೂಪಾಗಿರುವ ಪೀಠೋಪಕರಣಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮನೆಗೆ ತಂದ ಪೀಠೋಪಕರಣವನ್ನು ಇಡುವ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ಎಂದಿಗೂ ಪೀಠೋಪಕರಣವನ್ನು ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.