alex Certify ಖಾಲಿ ಖುರ್ಚಿಯಲ್ಲಿ ಯುವತಿ ಪ್ರತ್ಯಕ್ಷ; ನೆಟ್ಟಿಗರಿಗೆ ಗೊತ್ತಾಯ್ತಂತೆ ಜಾದೂಗಾರನ ಟ್ರಿಕ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಖುರ್ಚಿಯಲ್ಲಿ ಯುವತಿ ಪ್ರತ್ಯಕ್ಷ; ನೆಟ್ಟಿಗರಿಗೆ ಗೊತ್ತಾಯ್ತಂತೆ ಜಾದೂಗಾರನ ಟ್ರಿಕ್‌

ಪುಟ್ಟ ಮಕ್ಕಳು ಮಾತ್ರವಲ್ಲ, ಹಿರಿಯರೂ ಸಹ ಮ್ಯಾಜಿಕ್​ ಶೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಜಾದೂಗಾರರು ಚತುರ ತಂತ್ರಗಾರರು, ಅಸಾಧ್ಯವಾದ ಕಾರ್ಯವನ್ನು ಸಾಧ್ಯವಾಗುವಂತೆ ಮಾಡುವ ಮೂಲಕ ನಮ್ಮ ಕಣ್ಣುಗಳನ್ನು ಮರುಳು ಮಾಡುತ್ತಾರೆ.

ಎಲ್ಲಾ ಮ್ಯಾಜಿಕ್​ ತಂತ್ರಗಳನ್ನು ಕೆಲವು ತಂತ್ರ ಮತ್ತು ರಹಸ್ಯಗಳೊಂದಿಗೆ ಗುರುತಿಸಲಾಗಿದೆ, ಅದು ಮಾನವ ಕಣ್ಣು ಗಮನಿಸುವುದಿಲ್ಲ. ಆದರೆ, ನಾವು ಬೆಳೆದಂತೆ ತಂತ್ರಗಳ ಹಿಂದಿನ ಮಾಸ್ಟರ್​ ಪ್ಲಾನ್​ ಅನ್ನು ನಾವು ಅರಿತುಕೊಳ್ಳುತ್ತೇವೆ.

ನೆಟ್ಟಿಗರನ್ನು ರಂಜಿಸಿದ ಆದರೆ ಮೋಸಗೊಳಿಸದ ಇತ್ತೀಚಿನ ವೆೈರಲ್​ ವೀಡಿಯೊ ಇದೇ ರೀತಿಯ ಘಟನೆಯನ್ನು ತೋರಿಸುತ್ತದೆ. ನೆಕ್ಸ್ಟ್ ಲೆವೆಲ್​ ಸ್ಕಿಲ್ಸ್​ ಎಂಬ ಹೆಸರಿನ ಟ್ವಿಟ್ಟರ್​ ಖಾತೆಯಲ್ಲಿ ವೀಡಿಯೊವನ್ನು ಅಪ್​ಲೋಡ್​ ಮಾಡಿದ್ದು, ಅದು ಕೆಲವೇ ಸಮಯದಲ್ಲಿ ವೈರಲ್​ ಆಗಿದೆ.

9-ಸೆಕೆಂಡ್​ಗಳ ವೀಡಿಯೊ ಖಾಲಿ ರ್ಕುಚಿಯ ಮೇಲೆ ಕಪ್ಪು ಬಟ್ಟೆಯನ್ನು ಖುರ್ಚಿ ಮೇಲೆ ಮರೆ ಮಾಡುವ ಜಾದೂಗಾರನೊಂದಿಗೆ ಆರಂಭವಾಗುತ್ತದೆ.‌

ಮಾಂತ್ರಿಕನು ಸ್ವಲ್ಪ ಸಮಯ ಬಟ್ಟೆಯನ್ನು ಖುರ್ಚಿ ಮೇಲೆ ಹರಡಿದಾಗ ನೋಡುಗರ ಕಣ್ಣು ಏನೋ ಮ್ಯಾಜಿಕ್​ ಸಂಭವಿಸುತ್ತದೆ ಎಂದು ಕಾದಿತ್ತು. ವೀಕ್ಷಕರ ಉತ್ಸಾಹಕ್ಕೆ ಕುಂದು ಬಾರದಂತೆ ಆತ ಬಟ್ಟೆಯನ್ನು ಸರಿಸಿದಾಗ ಯುವತಿಯೊಬ್ಬರು ಖುರ್ಚಿಯ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರತ್ತ ಕೆೈ ಬೀಸಿದಳು.

ಆದರೆ ಈ ಮ್ಯಾಜಿಕ್​ ಹಿಂದಿನ ಟ್ರಿಕ್​ ಅನ್ನು ಅರ್ಥಮಾಡಿಕೊಳ್ಳುವಲ್ಲಿ ನೆಟ್ಟಿಗರು ಯಶಸ್ವಿಯಾಗಿದ್ದು, ಕಾಮೆಂಟ್​ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಖುರ್ಚಿಯ ಮೇಲ್ಭಾಗವನ್ನು ನೋಡಿ, ಹುಡುಗಿಯನ್ನು ಹೊರಗೆ ಬಿಡಲು ಎರಡು ಫ್ಲಾಪ್​ಗಳು ತೆರೆದುಕೊಳ್ಳುವುದನ್ನು ನೀವು ನೋಡಬಹುದು ಎಂದು ಒಬ್ಬ ಬಳಕೆದಾರರು ಕಾಮೆಂಟ್​ ಮಾಡಿದರೆ, ಇನ್ನೊಬ್ಬರು “ಕುರ್ಚಿಯಲ್ಲಿ ಗುಪ್ತ ವಿಭಾಗವಿದೆ…..” ಎಂದಿದ್ದಾರೆ.

ಮ್ಯಾಜಿಕ್​ ತಂತ್ರಗಳು ಇತ್ತೀಚಿನ ದಿನಗಳಲ್ಲಿ ಮನರಂಜನೆಯ ಭಾಗವಾಗಿದ್ದು, ಅದರ ತಂತ್ರಗಳನ್ನು ಕಂಡುಹಿಡಿಯುವಲ್ಲಿ ಜನರು ಉತ್ಸುಕರಾಗಿದ್ದಾರೆ. ಜಾದೂಗಾರ ತೋರಿದ ಯಾವ ಉಪಾಯಕ್ಕೂ ಅವರು ಕುರುಡಾಗಿ ಒಪ್ಪಿಕೊಳ್ಳಲ್ಲ.

https://twitter.com/SkillsLevel/status/1569279885801320450?ref_src=twsrc%5Etfw%7Ctwcamp%5Etweetembed%7Ctwterm%5E1569279885801320450%7Ctwgr%5E5ea6daaa38f01004f542be30031295a10883473a%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-magician-makes-woman-appear-on-chair-but-netizens-know-how-he-did-it-5948035.html

https://twitter.com/Mixed_Cuts/status/1569292714008780804?ref_src=twsrc%5Etfw%7Ctwcamp%5Etweetembed%7Ctwterm%5E1569292714008780804%7Ctwgr%5E5ea6daaa38f01004f542be30031295a10883473a%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-magician-makes-woman-appear-on-chair-but-netizens-know-how-he-did-it-5948035.html

https://twitter.com/GogetaKurasaki/status/1569280622291730432?ref_src=twsrc%5Etfw%7Ctwcamp%5Etweetembed%7Ctwterm%5E1569280622291730432%7Ctwgr%5E5ea6daaa38f01004f542be30031295a10883473a%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-magician-makes-woman-appear-on-chair-but-netizens-know-how-he-did-it-5948035.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...