ಇತ್ತೀಚಿನ ದಿನಗಳಲ್ಲಿ, ಹಲವಾರು ಜೋಡಿಗಳು ತಮ್ಮ ಮದುವೆಗೆ ಮೊದಲು ಒಪ್ಪಂದಕ್ಕೆ ಸಹಿ ಹಾಕುವುದನ್ನು ನೋಡಿರಬಹುದು. ಕೆಲವು ಜನರು ಕಟ್ಟುನಿಟ್ಟಾದ ಒಪ್ಪಂದ ಮಾಡಿಕೊಂಡರೆ, ಇತರರು ಮೋಜಿಗಾಗಿ ಈ ರೀತಿ ಮಾಡಲು ಇಷ್ಟಪಡುತ್ತಾರೆ. ಒಪ್ಪಂದಗಳು ಸಾಕಷ್ಟು ವ್ಯಾಪ್ತಿಯನ್ನು ಹೊಂದಿವೆ. ಇದೀಗ ವಧು-ವರನ ವಿಭಿನ್ನ ಒಪ್ಪಂದವೊಂದರ ಕಥೆ ವೈರಲ್ ಆಗಿದೆ.
ತಮಿಳುನಾಡಿನ ಥೇಣಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಹರಿಪ್ರಸಾದ್ ಭಾನುವಾರ ಪೂಜಾ ಅವರನ್ನು ವಿವಾಹವಾದರು. ಆದರೆ, ಈ ವೇಳೆ ವರನ ಸ್ನೇಹಿತರು ಒಂದು ಷರತ್ತು ಹಾಕಿದ್ದರು. ಮದುವೆಯಲ್ಲಿ ಹರಿಪ್ರಸಾದ್ ಸ್ನೇಹಿತರು 20 ರೂಪಾಯಿಯ ಸ್ಟಾಂಪ್ ಪೇಪರ್ ತಂದು ಪೂಜಾ ಅವರನ್ನು ಮದುವೆಯಾಗುವ ಮೊದಲು ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ.
ಸ್ಟಾಂಪ್ ಪೇಪರ್ನಲ್ಲಿದ್ದ ಪಠ್ಯವನ್ನು ಓದುತ್ತಿದ್ದಾಗ ಆಶ್ಚರ್ಯಗೊಂಡ ಪೂಜಾಗೆ ನಗು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸೂಪರ್ಸ್ಟಾರ್ ಕ್ರಿಕೆಟ್ ತಂಡಕ್ಕಾಗಿ ಶನಿವಾರ ಮತ್ತು ಭಾನುವಾರದಂದು ಪೂಜಾ, ಹರಿಪ್ರಸಾದ್ಗೆ ಕ್ರಿಕೆಟ್ ಆಡಲು ಅವಕಾಶ ನೀಡುವುದಾಗಿ ಅದರಲ್ಲಿ ಬರೆಯಲಾಗಿದೆ.
ಹರಿಪ್ರಸಾದ್ ಅವರು ಅತ್ಯಾಸಕ್ತಿಯ ಕ್ರಿಕೆಟ್ ಆಟಗಾರರಾಗಿದ್ದು, ಸೂಪರ್ ಸ್ಟಾರ್ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಮದುವೆಯ ನಂತರ ಹರಿಪ್ರಸಾದ್ ಕ್ರಿಕೆಟ್ ಆಡಲು ಯಾವುದೇ ಅಡೆತಡೆಗಳನ್ನು ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು, ಅವರ ಸ್ನೇಹಿತರು ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪೂಜಾ ಕೂಡ ಒಪ್ಪಿಕೊಂಡರು. ದಂಪತಿ ಸಹಿ ಮಾಡಿದ ಒಪ್ಪಂದದೊಂದಿಗೆ ಸ್ನೇಹಿತರು ಫೋಟೋ ಕ್ಲಿಕ್ಕಿಸಿ, ನವಜೋಡಿಗೆ ಶುಭಹಾರೈಸಿದರು.