ಕಾರಿನ ಹಿಂಬದಿ ಡಿಕ್ಕಿ ತೆರೆದು ಅದರಲ್ಲಿ ಮೂವರು ಮಕ್ಕಳು ಕುಳಿತಿದ್ದರೆ, ಹಿರಿಯರು ಮುಂದೆ ಕೂತು ಕಾರು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬಳಿಕ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ. ಸೋಂಚೋ ಜರಾ ಎಂಬ ಹೆಸರಿನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು 10 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ವೈರಲ್ ಆದ ವಿಡಿಯೋದಲ್ಲಿ ಮೂವರು ಮಕ್ಕಳು ಕಾರಿನಲ್ಲಿ ತೆರೆದ ಡಿಕ್ಕಿಯೊಳಗೆ ಕುಳಿತು ಆಟವಾಡುವುದನ್ನು ನೋಡಬಹುದು. ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ ತೋರಿದ್ದು, ಹೈದರಾಬಾದ್ ರಸ್ತೆಗಳಲ್ಲಿ ಕಾರನ್ನು ಈ ರೀತಿ ಚಲಾಯಿಸಿದ್ದಾರೆ. ಇದು ಸಂಪೂರ್ಣ ಬೇಜವಾಬ್ದಾರಿ ಮತ್ತು ಅಸುರಕ್ಷಿತ ಕೆಲಸವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅದು ಪೊಲೀಸ್ ಅಧಿಕಾರಿಗಳ ಗಮನವನ್ನು ಸೆಳೆದಿದೆ.
ವಿಡಿಯೋ ಹಂಚಿಕೊಳ್ಳುತ್ತಾ ಅವರು ಎಷ್ಟು ಬೇಜವಾಬ್ದಾರಿ ಪೋಷಕರು? ದಯವಿಟ್ಟು ಪರಿಶೀಲಿಸಿ ಸರ್ ಮತ್ತು ಕ್ರಮ ಕೈಗೊಳ್ಳಿ ಎಂದು ಶೀರ್ಷಿಕೆ ನೀಡಲಾಗಿದೆ. ನೆಟ್ಟಿಗರು ಮಕ್ಕಳೊಂದಿಗೆ ತುಂಬಾ ಅಸಡ್ಡೆ ತೋರಿದ್ದಕ್ಕಾಗಿ ಪೋಷಕರನ್ನು ದೂಷಿಸಿದ್ದಾರೆ.
ಮಕ್ಕಳ ಜೀವಕ್ಕೆ ಕುತ್ತು ತಂದ ಪೋಷಕರನ್ನು ಬಂಧಿಸಿ. ಪೋಷಕರು ತಮ್ಮ ಮಕ್ಕಳಿಗೆ ಯಾವ ರೀತಿಯ ಪಾಠಗಳನ್ನು ಕಲಿಸುತ್ತಿದ್ದಾರೆ. ಬೇಜವಾಬ್ದಾರಿಯುತ ಪೋಷಕರು ಬೇಜವಾಬ್ದಾರಿ ಮಕ್ಕಳನ್ನು ನಂತರ ಬೇಜವಾಬ್ದಾರಿ ನಾಗರಿಕರನ್ನಾಗಿ ಬೆಳೆಸುತ್ತಾರೆ. ಪೋಷಕರನ್ನು 5 ವರ್ಷಗಳವರೆಗೆ ವಾಹನ ಚಲಾಯಿಸುವುದನ್ನು ನಿಷೇಧಿಸಿ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿದ ಕೂಡಲೇ ಸೈಬರಾಬಾದ್ ಪೊಲೀಸರು ಪ್ರತಿಕ್ರಿಯಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.