ಶಿವಮೊಗ್ಗ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಪಿ.ಎಂ.ಕಿಸಾನ್ ಇ-ಕೆವೈಸಿ ಮಾಡಿಸಲು ಸೆಪ್ಟೆಂಬರ್ 14 ಕಡೆಯ ದಿನವಾಗಿದೆ.
ಇ-ಕೆವೈಸಿಯನ್ನು ಮೊಬೈಲ್ ಆಧಾರಿತ ಮತ್ತು ಬಯೋಮಿಟ್ರಿಕ್ ಆಧಾರಿತ ಎರಡು ವಿಧಗಳಲ್ಲಿ ಮಾಡಿಸಬಹುದು. ರೈತರು ತಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್, ಗ್ರಾಮ ಒನ್ ಕೇಂದ್ರ, ರೈತರ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ ಗ್ತಾಮ ಪಂಚಾಯ್ತಿಗಳಿಗೆ ತಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಸ್ಮಾರ್ಟ್ಫೋನ್ ಬಳಸುತ್ತಿರುವ ರೈತರು ಪಿಎಂ ಕಿಸಾನ್ ವೆಬ್ಪೋರ್ಟಲ್ www.pmkisan.gov.in ಇಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದೆಂದು ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.