ಹಣ, ಆಸ್ತಿ ಮಾಡಲು ಯಾರು ಬಯಸುವುದಿಲ್ಲ ಹೇಳಿ. ಅದಕ್ಕಾಗಿ ಜೀವ ಇರುವವರೆಗೂ ಶ್ರಮ ಪಡ್ತಾರೆ. ಆದ್ರೆ ನಾವೇ ಮಾಡುವ ಕೆಲವೊಂದು ತಪ್ಪುಗಳಿಂದಾಗಿ ನಮ್ಮ ಕೈನಲ್ಲಿ ಹಣ ನಿಲ್ಲುವುದಿಲ್ಲ.
ಶಾಸ್ತ್ರಗಳ ಪ್ರಕಾರ ನಾವು ಕೆಲ ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಮತ್ತೆ ಕೆಲವನ್ನು ಬೇರೆಯವರಿಗೆ ನೀಡಬಾರದು. ಬೇರೆಯವರಿಂದ ಆ ವಸ್ತುಗಳನ್ನು ಪಡೆದ್ರೆ ನಮ್ಮ ಅಭಿವೃದ್ಧಿಗೆ ಅಡ್ಡಿಯುಂಟಾಗುತ್ತದೆ.
ಇದರಲ್ಲಿ ಹಣ ಕೂಡ ಒಂದು. ಬೇರೆಯವರ ಹಣವನ್ನು ಇಟ್ಟುಕೊಳ್ಳಬಾರದು. ಹಾಗೆ ಇಟ್ಟುಕೊಂಡರೆ ನಮ್ಮಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಬೇರೆಯವರ ಹಣದ ಮೇಲೆ ಆಸೆ ಇಟ್ಟವ ಧರ್ಮವನ್ನು ಪಾಲಿಸುವುದಿಲ್ಲ. ಎಲ್ಲಿ ಧರ್ಮವಿಲ್ಲವೋ ಅಲ್ಲಿ ಲಕ್ಷ್ಮಿ ಇರುವುದಿಲ್ಲ.
ಶಂಖ ಸ್ಮೃತಿ ಪ್ರಕಾರ ಬೇರೆಯವರ ಹಾಸಿಗೆಯಲ್ಲಿ ಮಲಗಿದರೂ ನಷ್ಟ ನಿಶ್ಚಿತ. ಹಣ ಮಾಡಲು ಇಚ್ಛಿಸುವ ವ್ಯಕ್ತಿ ಬೇರೆಯವರು ಮಲಗಿದ ಹಾಸಿಗೆಯಲ್ಲಿ ಮಲಗಬಾರದು.
ನಮ್ಮ ಬಳಿ ಎಷ್ಟೇ ಬಟ್ಟೆ ಇದ್ದರು ಬೇರೆಯವರ ಬಟ್ಟೆ ಧರಿಸುವ ಹವ್ಯಾಸ ಕೆಲವರಿಗಿರುತ್ತದೆ. ಆದ್ರೆ ಬೇರೆಯವರ ಬಟ್ಟೆಯನ್ನು ಧರಿಸುವುದು ಒಳ್ಳೆಯದಲ್ಲ.
ಇತರರ ಆಹಾರವನ್ನು ಸೇವಿಸಬಾರದು. ಹಾಗೆ ಮಾಡಿದ್ರೆ ಬಡತನ ಬೆನ್ನಿಗಂಟಿಕೊಳ್ಳುತ್ತದೆ. ಸುಧಾಮ, ಶ್ರೀಕೃಷ್ಣನ ಅನ್ನದ ಭಾಗವನ್ನು ಸೇವಿಸಿದ್ದನಂತೆ. ಹಾಗಾಗಿ ಆತ ಬಡತನದಲ್ಲಿ ಜೀವಿಸಬೇಕಾಯಿತು.
ಅನ್ಯ ಮಹಿಳೆಯ ಸಂಬಂಧ ಹೊಂದುವುದರಿಂದ ಕಷ್ಟ ಅನುಭವಿಸಬೇಕಾಗುವುದಲ್ಲದೆ, ಹಣ ವ್ಯಯವಾಗುತ್ತದೆ.
ಸ್ನೇಹಿತರ ಅಥವಾ ಸಂಬಂಧಿಕರ ಕಾರು, ವಾಹನವನ್ನು ಕೆಲವರು ಪಡೆಯುತ್ತಾರೆ. ಶಂಖ ಸ್ಮೃತಿ ಪ್ರಕಾರ ಹಾಗೆ ಮಾಡುವುದರಿಂದ ಪಡೆದವನು ಹಣದ ಮುಗ್ಗಟ್ಟಿಗೊಳಗಾಗುತ್ತಾನೆ.
ಯಾವಾಗಲೂ ನಿಮ್ಮ ಮನೆಯಲ್ಲಿ ವಾಸಿಸಲು ಪ್ರಯತ್ನಿಸಿ. ಬೇರೆಯವರ ಮನೆಯಲ್ಲಿ ವಾಸ ಮಾಡಿದ್ರೆ ನಿಮ್ಮ ಬಳಿ ಹಣ ಸಂಗ್ರಹವಾಗುವುದಿಲ್ಲ.