ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯ ದೀಪಕ್ ಪಟದಾರಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರು ಪೊಲೀಸರ ವಿರುದ್ಧವೇ ಇದೀಗ ಶಂಕೆ ವ್ಯಕ್ತವಾಗಿದೆ.
ದೀಪಕ್ ಹತ್ಯೆ ಹಿಂದೆ ಹಳೆ ಹುಬ್ಬಳ್ಳಿ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳ ಕೈವಾಡದ ಬಗ್ಗೆ ಸಹೋದರ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಗಂಗಿನಾಳ ನಿವಾಸಿಯಾಗಿದ್ದ ದೀಪಕ್ ಪಟದಾರಿಯನ್ನು ಜುಲೈನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆಗೂ ಮುನ್ನ ಹುಷಾರಾಗಿರು ಎಂದು ಎ ಎಸ್ ಐ ಆಗಿರುವ ನಾಗರಾಜ್ ಕೆಂಚಣ್ಣವರ್, ಪರಶುರಾಮ್ ಕಾಳೆ ದೀಪಕ್ ವಾಟ್ಸಪ್ ಗೆ ಮೆಸೇಜ್ ಕಳುಹಿಸಿದ್ದರು. ಪ್ರಕರಣ ನಡೆದು ಇಷ್ಟು ದಿನಗಳಾದರೂ ಹತ್ಯೆ ಪ್ರಕರಣ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಹೀಗಾಗಿ ಕೊಲೆ ಹಿಂದೆ ಪೊಲೀಸರ ಕೈವಾಡದ ಬಗ್ಗೆಯೇ ಅನುಮಾನವಿದ್ದು ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ದೀಪಕ್ ಸಹೋದರ ಸಂಜಯ್ ಒತ್ತಾಯಿಸಿದ್ದಾರೆ.