ಮೊಬೈಲ್ ಕ್ಯಾಮರಾಗಳು ಬಂದ ಬಳಿಕ ಜನ ಚಿತ್ರೀಕರಣದಲ್ಲೇ ಹೆಚ್ಚು ಆಸಕ್ತಿ ವಹಿಸುತ್ತಾರೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಮಾನವೀಯತೆಯನ್ನೂ ಮರೆಯುತ್ತಾರೆ. ಅಂತವುದೇ ಒಂದು ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಹನುಮನಹಳ್ಳಿಯಲ್ಲಿ ಮಾನಸಿಕ ಅಸ್ವಸ್ಥ ಎನ್ನಲಾದ ಮಂಜುನಾಥ ಎಂಬ ಯುವಕ ರಾಷ್ಟ್ರೀಯ ಹೆದ್ದಾರಿಯಲ್ಲಿನ ಮೇಲ್ಸೇತುವೆಯ ವಿದ್ಯುತ್ ಕಂಬವೇರಿ ನೇಣು ಹಾಕಿಕೊಳ್ಳಲು ಮುಂದಾಗಿದ್ದಾನೆ.
ಇದನ್ನು ಜನರು ನೋಡುತ್ತಿದ್ದರೂ ಸಹ ಆತ ಕಂಬ ಹತ್ತುವುದರಿಂದ ಹಿಡಿದು ನೇಣು ಹಾಕಿಕೊಂಡು ಪ್ರಾಣ ಬಿಡುವವರೆಗೂ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಆತನನ್ನು ತಡೆಯುವ ಅವಕಾಶವಿದ್ದರೂ ಯಾರೂ ಸಹ ಅದಕ್ಕೆ ಮುಂದಾಗಿಲ್ಲ.