ಬೆಂಗಳೂರು: ಏನೋ ಮಗಾ ಎಂದು ಹೇಳಿದ್ದಕ್ಕೆ ಸ್ನೇಹಿತನನ್ನೇ ಆಟೋ ಚಾಲಕ ಕೊಲೆ ಮಾಡಿದ ಘಟನೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್.ಟಿ. ನಗರದ ನಿವಾಸಿ 23 ವರ್ಷದ ಸಿದ್ದಿಕಿ ಕೊಲೆಯಾದ ಆಟೋ ಚಾಲಕ. ಅವರು ಭಾನುವಾರ ರಾತ್ರಿ 11.30 ರ ಸುಮಾರಿಗೆ ಆಟೋ ಚಾಲನೆ ಮಾಡಿಕೊಂಡು ಜಾಲಹಳ್ಳಿ ನಿಲ್ದಾಣದ ಬಳಿ ಹೋಗಿದ್ದಾರೆ. ಅಲ್ಲೇ ಇದ್ದ ಸ್ನೇಹಿತ ಅಜಯ್ ನನ್ನು ಕಂಡು ಏನೋ ಮಗಾ ಕುಡಿಯಲು ನೀರಿದ್ದರೆ ಕೊಡು ಎಂದು ಕೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಅಜಯ್ ನನ್ನನ್ನೇ ಮಗ ಎಂದು ಕರೆತ್ತೀಯಾ ಎಂದು ಜಗಳವಾಡಿ ತನ್ನ ಬಳಿ ಇದ್ದ ಚಾಕುವಿನಿಂದ ಸಿದ್ದಿಕಿ ಹೊಟ್ಟೆ, ಎದೆಗೆ ಮೂರು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಿದ್ದಿಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಆರೋಪಿ ಅಜಯ್ ನನ್ನು ಬಂಧಿಸಲಾಗಿದೆ.