ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿಷ್ಟಿತ ಟೆನ್ನಿಸ್ ಮ್ಯಾಚ್ ಸೆಮಿಫೈನಲ್ ಪಂದ್ಯ. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಲೇ ಇತ್ತು. ಕ್ರೀಡಾಂಗಣದಲ್ಲಿ ಇದ್ದವರೆಲ್ಲರೂ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎಂದು ಉಸಿರು ಗಟ್ಟಿಯಾಗಿ ಹಿಡಿದುಕೊಂಡು ಪಂದ್ಯ ವೀಕ್ಷಿಸುತ್ತಿದ್ದರು.
ಅದೇ ಸಮಯದಲ್ಲಿ ಅಲ್ಲಿದ್ದ ಕ್ಯಾಮರಾಮನ್ ಕಣ್ಣಿಗೆ ಮಹಿಳೆಯೊಬ್ಬರು ಕಾಣಿಸುತ್ತಾರೆ. ಆತ ತಡ ಮಾಡದೇ ಕ್ಯಾಮರಾ ಝೂಮ್ ಮಾಡುತ್ತಾನೆ. ಆಗ ಕಂಡು ಬಂದು ದೃಶ್ಯ ನೋಡಿ ಜನ ಶಾಕ್ ಆಗುತ್ತಾರೆ. ಅಸಲಿಗೆ ಆಕೆ ಅಲ್ಲಿ ಉಲನ್ ಹಿಡಿದುಕೊಂಡು ಹೆಣಿಗೆ ಹಾಕ್ತಾ ಕುತಿರೊದು ಕ್ಯಾಮರಾ ಕಣ್ಣಿಗೆ ಬೀಳುತ್ತೆ.
ಸ್ಪೇನ್ ಕಾರ್ಲೊಸ್ ಅಲ್ಕರಾಜ್ ಹಾಗೂ ಅಮೆರಿಕಾದ ಫ್ರಾನ್ಸಿಸ್ ಟಿಯಾಫೊ ಪಂದ್ಯ ನಡೆಯುತ್ತಿದ್ದ ಸಮಯ. ಇಬ್ಬರೂ ಘಟಾನುಘಟಿಗಳು ಆಟಗಾರರು ಪಂದ್ಯ ಗೆಲ್ಲುವುದಕ್ಕೆ ಜಿದ್ದಾಜಿದ್ದಿ ನಡೆದಿತ್ತು. ವೀಕ್ಷರಿಗೆಲ್ಲರಿಗೂ ಟೆನ್ನಿಸ್ ಚೆಂಡಿನ ಮೇಲೆಯೇ ಕಣ್ಣು ನೆಟ್ಟಿತ್ತು.
ಆದರೆ ಕ್ಯಾಮರಾಮನ್ ಕಣ್ಣು ಮಾತ್ರ ಆ ವೀಕ್ಷಕರ ಮಧ್ಯದಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಬಿದ್ದಿತ್ತು. ಟೈಬ್ರೇಕರ್ ಸಮಯದಲ್ಲಿ ಮಹಿಳೆ ಮಾಡುತ್ತಿದ್ದ ಕೆಲಸ ನೋಡಿ ಏನು ಹೇಳಬೇಕು ಅನ್ನೋದು ತಿಳಿತಿಲ್ಲ ಅಂತ ಶೀರ್ಷಿಕೆ ಕೊಟ್ಟು ಚಂತಲ್ ಎನ್‌ವೈಸಿ ತಮ್ಮ ಟ್ವಿಟ್ಟರ್ ಅಕೌಂಟ್ ವಿಡಿಯೋನಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
ಈ ವಿಡಿಯೋ ನೋಡಿ ಕೆಲವರು ಶಾಕ್ ಆದ್ರೆ, ಇನ್ನೂ ಕೆಲವರು ಈ ಸಮಯಲ್ಲೂ ಮಹಿಳೆ ತನ್ನ ಕರ್ತವ್ಯ ಮರೆತಿಲ್ಲ ಅಂತ ಕಾಮೆಂಟ್ ಬಾಕ್ಸ್‌ನಲ್ಲಿ ಮೆಸೇಜ್ ಹಾಕಿದ್ದಾರೆ.
ಈ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಕರ್ಲೋಜ್ ಅಲ್ಕರಾಜ್ ಅಮೆರಿಕಾದ ಫ್ರಾನ್ಸಿಸ್ ಟಿಯಾಫೋ ಅವರನ್ನ ಸೋಲಿಸಿದ್ದಾರೆ. ಫೈನಲ್‌ನಲ್ಲಿ 19 ವರ್ಷದ ಕರ್ಲೋಜ್ ಅಲ್ಕರಾಜ್ ನಾರ್ವೆಯ ಕಾಸ್ಟರ್ ರೂಡ್ ಅವರನ್ನ ಸೋಲಿಸಿ, 17 ವರ್ಷದ ಬಳಿಕ ನಡಾಲ್ ದಾಖಲೆ ಸರಿಗಟ್ಟಿದ್ದಾರೆ ಅಲ್ಕರಾಜ್.