ಅಣ್ಣ-ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ ಎಂಬ ಹಾಡನ್ನು ನೀವು ಕೇಳಿರ್ತೀರಾ. ಚಿಕ್ಕವರಿರುತ್ತಾ ಜಗಳವಾಡುತ್ತಾ ಬೆಳೆಯುವ ಸಹೋದರ-ಸಹೋದರಿಯರು ಬೆಳೆಯುತ್ತಾ ಒಂದೊಳ್ಳೆ ಸಂಬಂಧವನ್ನು ಹೊಂದುತ್ತಾರೆ. ಇದೀಗ ಸಹೋದರ ಮತ್ತು ಸಹೋದರಿಯ ನಡುವಿನ ಅತ್ಯಂತ ಆರಾಧ್ಯ ವಿನಿಮಯದ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ. ಇದು 13 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಜರಾಹ್ ಮತ್ತು ಜೋಹಾನ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಜರಾಹ್ ತನ್ನನ್ನು ಜೋಹಾನ್ನ ಸಹೋದರಿ ಎಂದು ಪರಿಚಯಿಸಿಕೊಳ್ಳುವುದನ್ನು ಕಾಣಬಹುದು. ಅವಳು ತನ್ನ ಸಹೋದರನನ್ನು ಸಹ ಪ್ರತಿಯಾಗಿ ತನ್ನನ್ನು ಪರಿಚಯಿಸುವಂತೆ ಕೇಳಿಕೊಂಡಿದ್ದಾಳೆ. ಜೋಹಾನ್ ಕೂಡ ತನ್ನ ಸೋದರಿಯನ್ನು ಪರಿಚಯಿಸಿದ್ದಾನೆ. ಬಳಿಕ ಆತ ನೂಡಲ್ಸ್ ತಿನ್ನುವ ಸ್ಪರ್ಧೆ ನಮ್ಮಿಬ್ಬರ ಮಧ್ಯೆ ಇರುವುದಾಗಿ ಹೇಳಿದ್ದಾನೆ.
ಈ ವಿಡಿಯೋವನ್ನು ನೆಟ್ಟಿಗರು ಮನಸಾರೆ ಇಷ್ಟಪಟ್ಟಿದ್ದಾರೆ. ಸಂಗೀತ ಸಂಯೋಜಕ ಯಶರಾಜ್ ಮುಖಾಟೆ ಕೂಡ ಮುದ್ದಾದ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಬಹಳ ಮುದ್ದಾಗಿದೆ ಎಂದಿದ್ದಾರೆ.