ದೇಶದ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆ ಬರುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರದ ಒಂದು ಘಟನೆಯಲ್ಲಿ ಪರೀಕ್ಷೆ ಎದುರಿಸಲೇಬೇಕೆಂಬ ಹಠದಿಂದ ವಿದ್ಯಾರ್ಥಿನಿಯೊಬ್ಬರು ಕುಟುಂಬ ಸದಸ್ಯರ ನೆರವಿನಿಂದ ತುಂಬಿ ಹರಿಯುವ ನದಿಯನ್ನು ದಾಟಿ ಸಾಹಸ ಮೆರೆದಿದ್ದಾರೆ.
ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ತಡ್ಡಿ ಕಲಾವತಿ ಎಂದು ಗುರುತಿಸಲಾದ ಯುವತಿ ವಿಶಾಖಪಟ್ಟಣಂನಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕಾಗಿತ್ತು.
ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಸಹೋದರ ಹಾಗೂ ಮತ್ತೊಬ್ಬ ಕುಟುಂಬದವರ ಸಹಾಯದಿಂದ ದಾಟಿದರು. ತನ್ನ ಕುಟುಂಬ ಸದಸ್ಯರ ಸಹಾಯದಿಂದ ಹರಿಯುವ ನೀರಿನಲ್ಲಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಡ್ಡಿ ಕಲಾವತಿ ಮರಿರ್ವಲಸ ಗ್ರಾಮದ ನಿವಾಸಿಯಾಗಿದ್ದು, ವಿಜಯನಗರ ಜಿಲ್ಲೆಯ ಗಜಪತಿನಗರಂ ಮಂಡಲದಲ್ಲಿದೆ. ಮೂಲಗಳ ಪ್ರಕಾರ, ತಡ್ಡಿ ಕಲಾವತಿ ಎರಡು ದಿನಗಳ ಹಿಂದೆ ತನ್ನ ಸ್ವಗ್ರಾಮಕ್ಕೆ ಬಂದಿದ್ದಳು ಮತ್ತು ಶನಿವಾರ ಪರೀಕ್ಷೆ ಇದ್ದ ಕಾರಣ ಶುಕ್ರವಾರ ವಿಶಾಖಪಟ್ಟಣಕ್ಕೆ ಹೋಗಬೇಕಿತ್ತು.
ಭಾರೀ ಮಳೆಯಿಂದಾಗಿ ಚಂಪಾವತಿ ನದಿಯು ಉಕ್ಕಿ ಹರಿಯುತ್ತಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿತ್ತು. ನದಿಯ ಇನ್ನೊಂದು ದಡಕ್ಕೆ ಕರೆದೊಯ್ಯಲು ಯಾವುದೇ ದೋಣಿಗಳು ಲಭ್ಯವಿರಲಿಲ್ಲ. ಅನ್ಯ ಮಾರ್ಗವಿಲ್ಲದೇ ಆಕೆ ನದಿಗೆ ಧುಮುಕಿಯೇ ಬಿಟ್ಟಳು. ಆಕೆಗೆ ಈಜು ಗೊತ್ತಿಲ್ಲದ ಕಾರಣ ಸಹೋದರ ಮತ್ತು ಕುಟುಂಬದ ಮತ್ತೊಬ್ಬರು ಆಕೆಯನ್ನು ಹೆಗಲ ಮೇಲೆ ಹೊತ್ತು ನದಿ ದಾಟಲು ಸಹಾಯ ಮಾಡಿದರು.
https://twitter.com/KP_Aashish/status/1568448339078967301?ref_src=twsrc%5Etfw%7Ctwcamp%5Etweetembed%7Ctwterm%5E1568448339078967301%7Ctwgr%5E9d485706cf3a9985e2db3e61b24e3e657aa096f5%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-woman-swims-across-overflowing-river-with-familys-help-to-appear-for-her-exam-5623600%2F