ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಆರಂಭಿಕ ವಹಿವಾಟಿನಲ್ಲಿ ಶುಭ ಸುದ್ದಿ ಸಿಕ್ಕಿದೆ. ಶೇ.0.43% ಹೆಚ್ಚಳದೊಂದಿಗೆ ಸೆನ್ಸೆಕ್ಸ್ 60.000 ಕ್ಕೆ ಏರಿಕೆ ಕಂಡಿದ್ದರೆ, ನಿಫ್ಟಿ 80 ಪಾಯಿಂಟ್ ತಲುಪಿದೆ. ಏಷ್ಯನ್ ಮಾರುಕಟ್ಟೆಗಳಲ್ಲಿನ ಬೆಂಬಲ ಪ್ರವೃತ್ತಿ ಮತ್ತು ವಿದೇಶಿ ನಿಧಿಯ ಒಳಹರಿವಿನ ನಡುವೆ ಈಕ್ವಿಟಿ ಮಾನದಂಡಗಳು ಸಕಾರಾತ್ಮಕ ಆರಂಭವನ್ನು ನೀಡಿವೆ.
ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನೆಯ ದತ್ತಾಂಶ ಮಾರುಕಟ್ಟೆ ಆರಂಭದ ಬಳಿಕ ನಿಗದಿಯಾಗಲಿದ್ದು, ಅದಕ್ಕೂ ಮುನ್ನವೇ ಈ ಏರಿಕೆ ಕಂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಸತತ ಮೂರನೇ ಸೆಷನ್ನಲ್ಲಿನ ಏರಿಕೆ ಮೂಲಕ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 274.07 ಪಾಯಿಂಟ್ಗಳ ಏರಿಕೆ ಕಂಡು 60,067.21ಕ್ಕೆ ತಲುಪಿದೆ. ಇದೇ ರೀತಿಯಲ್ಲಿ, ಎನ್ಎಸ್ಇ ನಿಫ್ಟಿ 79.45 ಪಾಯಿಂಟ್ಗಳ ಏರಿಕೆ ಕಂಡು 17,910.50 ಕ್ಕೆ ತಲುಪಿದೆ.
30-ಷೇರುಗಳ ಸೆನ್ಸೆಕ್ಸ್ ಪ್ಯಾಕ್ನಿಂದ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಬಜಾಜ್ ಫಿನ್ಸರ್ವ್, ಮಹೀಂದ್ರ ಮತ್ತು ಮಹೀಂದ್ರಾ, ಟಾಟಾ ಸ್ಟೀಲ್ ಮತ್ತು ಐಸಿಐಸಿಐ ಬ್ಯಾಂಕ್ ಗೇನರ್ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಆದಾಗ್ಯೂ, ಎಚ್ಡಿಎಫ್ಸಿ, ಡಾ ರೆಡ್ಡೀಸ್, ಎಲ್ & ಟಿ, ಏಷ್ಯನ್ ಪೇಂಟ್ಸ್ ಮತ್ತು ಕೋಟಕ್ ಬ್ಯಾಂಕ್ ಹಿಂದುಳಿದಿರುವುದು ಅಚ್ಚರಿ ಮೂಡಿಸಿದೆ.
ಜಪಾನ್ ಸೇರಿದಂತೆ ಏಷ್ಯಾದ ಇತರೆ ಮಾರುಕಟ್ಟೆಗಳು ಸಕಾರಾತ್ಮಕ ವಲಯದಲ್ಲಿ ವಹಿವಾಟು ನಡೆಸುತ್ತಿದ್ದರೆ, ಚೀನಾ ಮತ್ತು ದಕ್ಷಿಣ ಕೊರಿಯಾದ ಷೇರುಗಳು ರಜಾದಿನಗಳಿಗಾಗಿ ಮುಚ್ಚಲ್ಪಟ್ಟವು. ಶುಕ್ರವಾರದಂದು ವಾಲ್ ಸ್ಟ್ರೀಟ್ ಉತ್ತಮ ಲಾಭದೊಂದಿಗೆ ಕೊನೆಗೊಂಡಿತ್ತು.
ಏತನ್ಮಧ್ಯೆ, ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 1.38 ಪ್ರತಿಶತದಷ್ಟು ಕುಸಿದು USD 91.53 ಕ್ಕೆ ತಲುಪಿದೆ. ವಿನಿಮಯ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರದಂದು 2,132.42 ಕೋಟಿ ರೂಪಾಯಿಗಳಷ್ಟು ನಿವ್ವಳ ಮಾಡಿದ್ದಾರೆ.