ಸಂತೋಷ, ಸಂಭ್ರಮ ವ್ಯಕ್ತಪಡಿಸಲು ವಯಸ್ಸು ಯಾವುದಾದರೇನು ಅಲ್ವಾ..? ನೃತ್ಯವು ಎಂದು ಮರೆಯಲಾಗದ ಒಂದು ಪರಿಪೂರ್ಣ ಕೌಶಲ್ಯವಾಗಿದ್ದು, ತಮಗೆ ಇಷ್ಚ ಬಂದಲ್ಲಿ ಹೆಜ್ಜೆ ಹಾಕುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲದೆ ಇರಲಾರದು.
ಹೌದು, ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಪುಟದಲ್ಲಿ ಗುಡ್ ನ್ಯೂಸ್ ಮೂವ್ಮೆಂಟ್ ಹಂಚಿಕೊಂಡಿದೆ. ಜನರು ಆಕೆಯ ಹಿಂದಿನಿಂದ ಹೋಗುತ್ತಿದ್ದರೂ ಯಾವುದಕ್ಕೂ ಅಂಜದ ಆಕೆ ತನ್ನ ವಾಕರ್ ಹಿಡಿದುಕೊಂಡು ನೃತ್ಯ ಮಾಡುವಲ್ಲಿ ತಲ್ಲೀನರಾಗಿದ್ದಾರೆ.
ಈ ವಯಸ್ಸಾದ ಮಹಿಳೆ ರೈಲಿಗಾಗಿ ಕಾಯುತ್ತಿರುವಾಗ ತನ್ನ ಟ್ಯಾಂಗೋ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 9.79 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, 48,000 ಕ್ಕೂ ಹೆಚ್ಚು ಲೈಕ್ ಗಳನ್ನು ಸಂಗ್ರಹಿಸಿದೆ. ಆಕೆಯ ಶಕ್ತಿ ನೆಟ್ಟಿಗರನ್ನು ಬೆರಗುಗೊಳಿಸಿದೆ. ವೃದ್ಧೆಯ ನೃತ್ಯವನ್ನು ನೆಟ್ಟಿಗರು ಮನಸಾರೆ ಇಷ್ಟಪಟ್ಟಿದ್ದಾರೆ.