ಉಡುಪಿ: ಕೇಂದ್ರ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಮಂತ್ರಾಲಯದ ಆದೇಶದ ಮೇರೆಗೆ ಸೆಪ್ಟಂಬರ್ ನಿಂದ ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರು ಆಹಾರಧಾನ್ಯ ಪಡೆಯಲು ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಆಧಾರಿತ ಬಯೋಮೆಟ್ರಿಕ್ /ಒಟಿಪಿ ದೃಢೀಕರಣದ ಮೂಲಕ ಪಡಿತರ ಪಡೆದುಕೊಳ್ಳಬೇಕಿದೆ.
ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿದಾರರು ಪಿಎಂಜಿಕೆವೈ, ಎನ್.ಎಫ್.ಎಸ್.ಎ., ಯೋಜನೆಯಡಿ ಆಹಾರ ಧಾನ್ಯ ಪಡೆದುಕೊಳ್ಳಲು ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಆಧಾರಿತ ಒಟಿಪಿ ದೃಢೀಕರಣ ನೀಡುವುದರ ಮೂಲಕ ಪಡಿತರ ಪಡೆದುಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 1967 ಅಥವಾ 14445 ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.