ಚಿಕ್ಕಬಳ್ಳಾಪುರ: ಜಲಾಶಯದ ಬಳಿಯ ಹೊಂಡದಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಹೋಗಿ ಸ್ನೇಹಿತರಿಬ್ಬರೂ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ.
ಹೊಂಡದಲ್ಲಿ ಮುಳುಗಿ 20 ವರ್ಷದ ಸಚ್ಚಿದಾನಂದ ಹಾಗೂ ಆತನ ರಕ್ಷಣೆಗೆ ತೆರಳಿದ್ದ ನರೇಶ್ ಬಾಬು ಮೃತರು. ಚಿಕ್ಕಬಳ್ಳಾಪುರದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಸಚ್ಚಿದಾನಂದ ಸ್ನೇಹಿತರ ಜೊತೆ ಜಲಾಶಕ್ಕೆ ಬಂದಿದ್ದ. ಡ್ಯಾಂ ಬಳಿ ಹೊಂಡದಲ್ಲಿ ಈಜಲು ತೆರಳಿದ್ದ. ಈ ವೇಳೆ ಹೊಂಡದಲ್ಲಿ ಮುಳುಗುತ್ತಿದ್ದ ಸಚ್ಚಿದಾನಂದ ರಕ್ಷಣೆಗಾಗಿ ಮೊರೆಯಿಟ್ಟಿದ್ದ. ಆತನ ರಕ್ಷಣೆಗೆಂದು ಹೋದ ನರೇಶ್ ಬಾಬು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನರೇಶ್ ಬಾಬು ಗೌರಿಬಿದನೂರಿನ ರಾಮಚಂದ್ರಾಪುರ ಮೂಲದವರು. ನರೇಶ್ ಶವ ಪತ್ತೆಯಾಗಿದ್ದು, ಸಚ್ಚಿದಾನಂದನ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ.